ಅಂಬಿ ನೆಚ್ಚಿನ ‘ಕನ್ವರ್’ ಜೊತೆ ಸೆಲ್ಫಿಗೆ ಪೋಸ್ ಕೊಟ್ಟ ದಚ್ಚು !

ಬೆಂಗಳೂರು, ಜನವರಿ 13, 2019 (www.justkannada.in): ರೆಬಲ್ ಸ್ಟಾರ್ ಅಂಬರೀಶ್ ಅವರ ಪ್ರೀತಿಯ ನಾಯಿ ಕನ್ವರ್ ಜೊತೆ ದರ್ಶನ್ ಪೋಸ್ ಕೊಟ್ಟಿದ್ದಾರೆ.

ಅಂಬಿ ತಮ್ಮ ಮನೆಯಲ್ಲಿ ಎರಡು ಶ್ವಾನಗಳನ್ನು ಸಾಕಿದ್ದರು. ಈ ಶ್ವಾನಗಳಿಗೆ ಅಂಬಿ ಕಂಡರೂ ಅಷ್ಟೇ ಪ್ರೀತಿ. ಈ ನಾಯಿಗಳಿಗೆ ಒಂದಕ್ಕೆ ಕನ್ವರ್ ಲಾಲ್ ಹಾಗೂ ಮತ್ತೊಂದಕ್ಕೆ ಬುಲ್ ಬುಲ್ ಎಂದು ಹೆಸರಿಟ್ಟಿದ್ದರು.

ಇತ್ತೀಚೆಗೆ ಅಂಬಿ ಮನೆಗೆ ದರ್ಶನ್ ಭೇಟಿ ನೀಡಿದ್ದಾರೆ. ಈ ವೇಳೆ ಕನ್ವರ್ ಲಾಲ್ ನೋಡಿ ಅದರ ಜೊತೆ ಆಟವಾಡಿದ್ದಾರೆ. ಹಾಗೂ ಅದರೊಟ್ಟಿಗೆ ಸೆಲ್ಫಿಯೊಂದನ್ನು ತೆಗೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ದರ್ಶನ್ ಜೊತೆ ಕನ್ವರ್ ಕೂಡ ಪ್ರೀತಿಯಿಂದ ಸೆಲ್ಫಿಗೆ ಫೋಸ್ ಕೊಟ್ಟಿದೆ.