ಮೈಸೂರಿನ ಫಾರ್ಮ್ ಹೌಸ್’ನಲ್ಲಿ ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್ ಕೊಂಡ ದಚ್ಚು!

ಬೆಂಗಳೂರು, ಜುಲೈ 16, 2020 (www.justkannada.in): ಕೃಷಿ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದಚ್ಚು ತಮ್ಮ ಲಾಕ್ ಡೌನ್ ಬಿಡುವಿನ ವೇಳೆಯನ್ನು ವಿನಿಯೋಗಿಸುತ್ತಿದ್ದಾರೆ.

ಇದೀಗ ಕೃಷಿ ಚಟುವಟಿಕೆಗಳಾಗಿ ಟ್ರ್ಯಾಕ್ಟರ್ ಒಂದನ್ನು ಖರೀದಿಸಿರುವ ಚಾಲೆಂಜಿಂಗ್ ಸ್ಟಾರ್, ಸ್ವತಃ ತಾವೇ ಅದನ್ನು ಚಲಾಯಿಸುವ ಮೂಲಕ ಟೆಸ್ಟ್ ಡ್ರೈವ್ ಮಾಡಿದ್ದಾರೆ.

ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.