ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಡಿ ಬಾಸ್’

ಬೆಂಗಳೂರು,ಫೆಬ್ರವರಿ,16,2021(www.justkannada.in): ಇಂದು  ಸ್ಯಾಂಡಲ್ ವುಡ್  ನಟ  ಚಾಲೆಂಜಿಂಗ್ ಸ್ಟಾರ್ ದರ್ಶನ್  ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಆದರೆ ಡಿ ಬಾಸ್ ಕೊರೋನಾ ಹಿನ್ನೆಲೆ ಈ ವರ್ಷ  ಹುಟ್ಟುಹಬ್ಬದ ಸಂಭ್ರಮವನ್ನ ಅದ್ದೂರಿಯಾಗಿ ಆಚರಿಸದಿರಲು ನಿರ್ಧರಿಸಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.jk

ಇತ್ತೀಚೆಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದ ನಟ ದರ್ಶನ್,  ಅವರ ಮನೆಯ ಹೊರಗೆ ಜಮಾಯಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿ,  ಅವರ ಜನ್ಮದಿನವನ್ನು ಅವರೊಂದಿಗೆ ಆಚರಿಸದಿರಲು ಕಾರಣವನ್ನೂ ಅವರು ವಿವರಿಸಿದ್ದರು.

ಕೊರೋನಾ ಇನ್ನೂ ಸಂಪೂರ್ಣ ಹತೋಟಿಗೆ ಬಂದಿಲ್ಲ. ಬೇರೆ ಸ್ಥಳದಿಂದ ಬಂದಿರುವ ನನ್ನ’ ಸೆಲೆಬ್ರಿಟಿ ‘ಅಭಿಮಾನಿಗಳಿಗೆ ತೊಂದರೆಯಾಗುವುದನ್ನು ನಾನು ಬಯಸುವುದಿಲ್ಲ. ಪೊಲೀಸರು ಈಗಾಗಲೇ ಹಲವಾರು ಇತರ ಕೆಲಸಗಳ ಒತ್ತಡದಲ್ಲಿದ್ದಾರೆ. ಒಂದು ದಿನ ಜನಸಮೂಹವನ್ನು ನಿರ್ವಹಿಸುವ ಕರ್ತವ್ಯವನ್ನು ಅವರಿಗೆ ನೀಡಿದರೆ ಅವರ ಮೇಲೆ ಇನ್ನಷ್ಟು ಕೆಲಸದ ಒತ್ತಡ ಬೀಳಲಿದೆ ಯಾರನ್ನೂ ಗೊಂದಲದಲ್ಲಿ ಬೀಳಿಸಲು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ. actor-challanging star-Darshan- birthday

ಈ ಮಧ್ಯೆ ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಹುನಿರೀಕ್ಷಿತ ದರ್ಶನ್ ಅಭಿನಯದ ರಾಬರ್ಟ್”” ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದ್ದು, ಇಂದು ಚಿತ್ರದ ಟ್ರೈಲರ್ ಅನ್ನು ಬಿಡುಗಡೆಯಾಗಿದೆ.

Key words: actor-challanging star-Darshan- birthday