ಮೈಸೂರಿನ ಒಂಟಿಕೊಪ್ಪಲಿನ ವೆಂಕಟರಮಣಸ್ವಾಮಿ‌ ದೇವಸ್ಥಾನದ ಟ್ರಸ್ಟಿಗಳಿಂದ ಹಣ ಲೂಟಿ ಆರೋಪ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ.

ಮೈಸೂರು,ಜುಲೈ,23,2022(www.justkannada.in):ಮೈಸೂರಿನ ಸುಪ್ರಸಿದ್ಧ ದೇವಾಲಯ ‌2ನೆಯ ತಿರುಪತಿ ಎಂದು ಖ್ಯಾತಿ ಪಡೆದಿರುವ ಮೈಸೂರಿನ ಒಂಟಿಕೊಪ್ಪಲಿನ ವೆಂಕಟರಮಣ ಸ್ವಾಮಿ‌ ದೇವಾಲಯದಲ್ಲಿ ಅಲ್ಲಿನ ಟ್ರಸ್ಟಿಗಳು ಹಣ ಲೂಟಿ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಮೈಸೂರು ನಗರ ಪಾಲಿಕೆ ‌ಸದಸ್ಯರಾದ‌ ಲೋಕೇಶ್ ಪಿಯಾ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ದೇವಸ್ಥಾನದ ಟ್ರಸ್ಟಿಗಳು ಸಾರ್ವಜನಿಕರ ಕೋಟಿ ಗಟ್ಟಲೆ ಹಣವನ್ನು ಕೊಳ್ಳೆ ಹೊಡೆದಿರುವುದು ತುಂಬಾ ದುರದೃಷ್ಟಕರ.  ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ‌ ಕೈಗೊಂಡು ದೇವಾಲಯವನ್ನು ಮುಜರಾಯಿಗೆ ವಹಿಸಬೇಕು. ಇಲ್ಲವಾದಲ್ಲಿ ದೇವಸ್ಥಾನದ ಟ್ರಸ್ಟೀಗಳ ವಿರುದ್ದ ದೇವಾಲಯದ ಮುಂಭಾಗದಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪ್ರಶಾಂತ್ ಆರ್ಯ, ಸ್ಮರಣ್, ಶೇಖರ್, ನಾಗೇಶ್, ಮಂಜು, ರಾಜು, ಸಾಗರ್ ಮುಂತಾದವರು ಪಾಲ್ಗೊಂಡಿದ್ದರು.

Key words: Accused – looting -money – trustees – Venkataramanaswamy temple – Mysore.-protest