ನಿನ್ನೆ ನಡೆದ ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ- ಡಿಸಿಪಿ ಗೀತಾ ಪ್ರಸನ್ನ ಹೇಳಿಕೆ…

kannada t-shirts

ಮೈಸೂರು,ಮಾರ್ಚ್,23,2021(www.justkannada.in):  ನಿನ್ನೆ ನಗರದ ಹಿನಕಲ್ ರಿಂಗ್ ರಸ್ತೆಯಲ್ಲಿ ಸಂಚಾರಿ ಪೊಲೀಸರ ತಪಾಸಣೆ ವೇಳೆ ಅಯತಪ್ಪಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಪ್ರಕರಣ ಸಂಬಂಧ ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ. ನಿನ್ನೆಯ ಘಟನೆಯಲ್ಲಿ ನಮ್ಮ ಇಬ್ಬರು ಪೊಲೀಸರಿಗೆ ಹಲ್ಲೆಯಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿಪಿ ಗೀತಾ ಪ್ರಸನ್ನ ಹೇಳಿದ್ದಾರೆ.jk

ಘಟನೆ ಕುರಿತು ಇಂದು ಮಾತನಾಡಿದ ಡಿಸಿಪಿಉ ಗೀತಾ ಪ್ರಸನ್ನ, ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ. ವಾಹನ ತಪಾಸಣೆ ಮಾಡುವ ಜಾಗದಿಂದ ಅವರು ದೂರದಲ್ಲೆ ಇದ್ದರು. ಹಿಂಬದಿಯಿಂದ ಬಂದ ಟಿಪ್ಪರ್‌ನಿಂದ ಘಟನೆ ಜರುಗಿದೆ. ಪೊಲೀಸರು ತಮ್ಮ ಕರ್ತವ್ಯವನ್ನಷ್ಟೆ ನಿರ್ವಹಿಸಿದ್ದಾರೆ. ಸರ್ಕಾರ ಸೂಚಿಸಿದ ದಂಡವನ್ನಷ್ಟೆ ನಾವು ವಸೂಲಿ ಮಾಡುತ್ತಿದ್ದೇವೆ‌. ಜನರಿಗೆ ಇದರಿಂದ ತೊಂದರೆ ಆಗುತ್ತೆ ಅಂದ್ರೆ ಅದನ್ನ ಬದಲಾಯಿಸೋಣ. ಕಾನೂನು ಪಾಲನೆ ಎಲ್ಲರ ಜವಾಬ್ದಾರಿ. ಅದನ್ನ ಜನರಿಗೆ ತೊಂದರೆಯಾಗದಂತೆ ಜಾರಿಗೆ ತರೋದೆ ನಮ್ಮ ಕೆಲಸ ಎಂದು ತಿಳಿಸಿದರು.

ನಿನ್ನೆ ಘಟನೆ ನಂತರ ಹಲವು ದೂರುಗಳು ಬಂದಿದೆ. ಆ ದೂರುಗಳನ್ನ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಇಂದು ಎಲ್ಲ ಸಿಬ್ಬಂದಿಗಳ ಸಭೆ ಕರೆದು ಮಾಹಿತಿ ಪಡೆಯುತ್ತೇವೆ. ಸಿಬ್ಬಂದಿ ಸಮಸ್ಯೆ ಹಾಗೂ ಜನರ ಸಮಸ್ಯೆ ಎರಡನ್ನು ಅಲಿಸಿ ಪರಿಹಾರ ಹುಡುಕುತ್ತೇವೆ. ಹಾಗಂತ ನಾನು ವಾಹನ ತಪಾಸಣೆ ನಿಲ್ಲಿಸೋಕೆ ಆಗಲ್ಲ ಎಂದು ಡಿಸಿಪಿ ಗೀತಾ ಪ್ರಸನ್ನ ಹೇಳಿದರು.

Key words: accident-death- bike rider- police – incident-DCP- Geetha Prasanna

website developers in mysore