ರಾಜೀನಾಮೆ ಅಂಗೀಕರಿಸದಿದ್ರೆ ಪಕ್ಷದ ಶಾಸಕತ್ವವೂ ಬೇಡ- ಪಕ್ಷ ತೊರೆಯುವ ಪರೋಕ್ಷ ಎಚ್ಚರಿಕೆ ನೀಡಿದ್ರೆ ಶಾಸಕ ಹೆಚ್ ವಿಶ್ವನಾಥ್..

kannada t-shirts

ಬೆಂಗಳೂರು,ಜೂ,20,2019(www.justkannada.in): ದಯಮಾಡಿ ನನ್ನ ರಾಜೀನಾಮೆ ಅಂಗೀಕರಿಸಿ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ವಹಿಸಿ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಅಂಗೀಕರಿಸದಿದ್ರೆ ಪಕ್ಷದ ಶಾಸಕತ್ವವೂ ಬೇಡ ಎಂದು ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನ ಹೆಚ್.ಡಿಕೆಗೆ ವಹಿಸುವುದು ಒಳ್ಳೆಯದು. ಪಕ್ಷ ಮತ್ತು ಸಿಎಂ ಸ್ಥಾನ ಎರಡನ್ನು ನಿಭಾಯಿಸಿದ ಉದಹಾರಣೆ ಇದೆ.  ಹೀಗಾಗಿ ಹೆಚ್.ಡಿ ಕುಮಾರಸ್ವಾಮಿ ಎರಡನ್ನು ನಿಭಾಯಿಸಲಿ. ನನ್ನ ರಾಜೀನಾಮೆ ಅಂಗೀಕರಿಸಿ..ಮಾಧ್ಯಮ ಮೂಲಕವೇ ಮನವಿ ಮಾಡುವೆ ಪಕ್ಷದ ಹಿತದೃಷ್ಟಿಯಿಂದ ಸಿಎಂ ಕುಮಾರಸ್ವಾಮಿ ಗೆ ರಾಜ್ಯಾಧ್ಯಕ್ಷ ಸ್ಥಾನ ವಹಿಸುವುದು ಉತ್ತಮ. ಜೆಡಿಎಸ್ ಕೋಟಾದ ಖಾಲಿ ಸಚಿವ ಸ್ಥಾನ ಭರ್ತಿ ಮಾಡಿ. ಸಚಿವರಾಗಿರುವ ಪಕ್ಷೇತರರಿಗೆ ಶೀಘ್ರವಾಗಿ ಖಾತೆ ಹಂಚಿಕೆ ಮಾಡಿ. ಅವರ ಸಮುದಾಯಕ್ಕೆ ನೋವುಂಟುಮಾಡಬೇಡಿ ಎಂದು ಮನವಿ ಮಾಡಿದರು.

ನನ್ನ ಅನುಭವವನ್ನು ಸಿಎಂ ಆಗಲಿ. ಸಿದ್ದರಾಮಯ್ಯ ಆಗಲಿ ಉಪಯೋಗಿಸಿಕೊಂಡಿಲ್ಲ ಎಂದು ಅಳಲು ತೋಡಿಕೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ , ಒಬ್ಬನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಒಳ್ಳೆಯದಲ್ಲ…ಸಿಎಂ ಜತೆ ಕೆಲಸ ಮಾಡಬೇಕೆಂಬ ಆಸೆ ಇತ್ತು..ಆದ್ರೆ ಸನ್ನಿವೇಶ ಆದಕ್ಕೆ ಆಸ್ಪದ ಕೊಟ್ಟಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಅಂಗೀಕರಿಸದಿದ್ರೆ ಪಕ್ಷದ ಶಾಸಕತ್ವವೂ ಬೇಡ ಎನ್ನುವ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ  ಹೆಚ್,ವಿಶ್ವನಾಥ್ ಪರೋಕ್ಷ ಎಚ್ಚರಿಕೆ ನೀಡಿದರು.

ಸಮನ್ವಯ ಸಮಿತಿಗೆ ಸೇರ್ಪಡೆ ಆಗದಿದ್ದಕ್ಕೆ  ಬೇಸರ ವ್ಯಕ್ತಪಡಿಸಿದ ಹೆಚ್. ವಿಶ್ವನಾಥ್ ನಾನು ಕಾಂಗ್ರೆಸ್ ನಲ್ಲಿ ಇದ್ದಿದ್ರೆ ರೋಷನ್ ಬೇಗ್ ಸ್ಥಿತಿಯೇ ನನಗೂ ಬರ್ತಿತ್ತು. ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಶಾಸಕ ಅಲ್ಪಸಂಖ್ಯಾತ ಮುಖಂಡ ರೋಷನ್ ಬೇಗ್ ಅವರನ್ನು ಅಮಾನತು ಮಾಡಿಸಿದ್ದಾರೆ. ಕಾಂಗ್ರೆಸ್ ನಲ್ಲಿದ್ದಿದ್ರೆ ನನ್ನ ಕಥೆಯೂ ಇದಕ್ಕಿಂತ ಹೊರತಾಗ್ತಿರಲಿಲ್ಲ ಎಂದು ನುಡಿದರು.

ಶಿಕ್ಷಣ ಇಲಾಖೆಗೆ ಸಚಿವರನ್ನ ನೇಮಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೆಚ್.ವಿಶ್ವನಾಥ್, ಪ್ರಾಥಮಿಕ ಶಿಕ್ಷಣ ಇಲಾಖೆಗೆ ಮುಖ್ಯಸ್ಥರೇ ಇಲ್ಲ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನ ಕಡೆಗಣಿಸಲಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆ ಜಿ.ಟಿ ದೇವೇಗೌಡರ ಕೈಯಲ್ಲಿ ಇದೆ. ಆದರೇ ಪ್ರಾಥಮಿಕ ಶಿಕ್ಷಣ ಇಲಾಖೆಗೆ ಸಚಿವರಿಲ್ಲದೆ ಸೊರಗಿದೆ. ಶಿಕ್ಷಣ ಇಲಾಖೆ ಅಂಧಕಾರದತ್ತ ಹೋಗಬಾರದು.  ಕೂಡಲೇ ಶಿಕ್ಷಣ ಇಲಾಖೆಗೆ ಸಚಿವರನ್ನ ನೇಮಿಸಿ.  ಶಿಕ್ಷಣ ಇಲಾಖೆಯನ್ನ ತಿರಸ್ಕರಿಸಿದ ಸರ್ಕಾರವನ್ನ ಜನ ಕ್ಷಮಿಸುವುದಿಲ್ಲ ಎಂದು ಹೇಳಿದರು.

Key words: accept – resignation-jds-MLA –H.Vishwanath-Banagalore

 

website developers in mysore