ಬಿಜೆಪಿಯವರ ಮನೆ ಮೇಲೆ ಏಕೆ ದಾಳಿಯಾಗುತ್ತಿಲ್ಲ- ಎಸಿಬಿ ದಾಳಿಗೆ ಶಾಸಕ ಜಮೀರ್ ಸಹೋದರ ಕಿಡಿ.

Promotion

ಬೆಂಗಳೂರು,ಜುಲೈ,5,2022(www.justkannada.in): ಆದಾಯಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ  ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್  ನಿವಾಸ ಕಚೇರಿ ಮೇಲೆ ಇಂದು ಬೆಳ್ಳಂ ಬೆಳಗ್ಗೆ ಭ್ರಷ್ಟಾಚಾರ ನಿಗ್ರದ ದಳದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಕಂಟೋನ್ಮೆಂಟ್​ನಲ್ಲಿರುವ ಜಮೀರ್ ಅಹಮದ್ ಖಾನ್ ಅವರ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್​ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಏಕಕಾದಲ್ಲಿ 40 ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಸಹೋದರ ಶಕೀಲ್, ನಾವು ನಮ್ಮ ಪಾಡಿಗೆ ಸರಿಯಾಗೆ ಇದ್ದೇವೆ. ಎಸಿಬಿ ಅವರ ಕೆಲಸ ಮಾಡುತ್ತಿದ್ದಾರೆ.  ಅವರನ್ನ ಬ್ಲೇಮ್ ಮಾಡಲ್ಲ ಆದರೆ ಬಿಜೆಪಿಯವರ ಮನೆ ಮೇಳೆ ಏಕೆ ದಾಳಿಯಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ.  ಎಸಿಬಿ ದಾಳಿಗೂ ಮೊದಲು ಇಡಿ ಅಧಿಕಾರಿಗಳು ಬಂದಿದ್ದರು. ಈ ಹಿಂದೆಯೇ ಇಡಿ ದಾಳಿ ನಡೆಸಿದ್ರೂ ಏನು ಸಿಗಲಿಲ್ಲ. ಈಗ ಎಸಿಬಿ ದಾಳಿ ಆಗಿದೆ. ಸಹಕಾರ ನೀಡುತ್ತೇವೆ ಎಂದರು.

Key words: ACB- attack-MLA- Zameer -brother