ಕೆಎಎಸ್ ಅಧಿಕಾರಿ ಸುಧಾ ಮನೆ ಮೇಲೆ ಎಸಿಬಿ ದಾಳಿ ಕೇಸ್: ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆ…

ಬೆಂಗಳೂರು,ನವೆಂಬರ್,7,2020(www.justkannada.in):  ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಡಠಾ.ಬಿ ಸುಧಾ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದು ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ ಎನ್ನಲಾಗಿದೆ.jk-logo-justkannada-logo

ಬೆಂಗಳೂರಿನ ಕೋಡಿಹಳ್ಳಿಯಲ್ಲಿರುವ ಸುಧಾ ಅವರ ನಿವಾಸ ಸೇರಿ ಏಕ ಕಾಲದಲ್ಲಿ ಆರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ಸುಧಾ ಅವರಿಗೆ ಸೇರಿದ ಕೆಜಿಗಟ್ಟಲೆ ಚಿನ್ನ, 10 ಲಕ್ಷ ರೂ. ನಗದು ಹಾಗೂ ದಾಖಲೆ ಪತ್ರಗಳು ಪತ್ತೆಯಾಗಿದೆ.

ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿಯಾಗಿರುವ ಡಾ.ಸುಧಾ, ಈ ಹಿಂದೆ ಬಿಡಿಎಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದರು. ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರ ಆರೋಪದ ಮೇಲೆ ಸಾರ್ವಜನಿಕರೊಬ್ಬರು ಖಾಸಗಿ ದೂರು ದಾಖಲಿಸಿದ್ದರು.ACB -attack - KAS officer- Sudha's –house- found -large amounts - jewelry

ಈ ಹಿನ್ನೆಲೆ ಇಂದು ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ನೇತೃತ್ವದ ತಂಡದಿಂದ ಸುಧಾ ಅವರ ಬೆಂಗಳೂರಿನ ಕೋಡಿಹಳ್ಳಿ ನಿವಾಸ, ಯಲಹಂಕದ ಫ್ಲಾಟ್, ಬ್ಯಾಟರಾಯನಪುರ, ಬಿಇಎಂಎಲ್ ಮನೆ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಅಪಾರ ಪ್ರಮಾಣದ ಚಿನ್ನ ಪತ್ತೆ ಹಿನ್ನೆಲೆ ಚಿನ್ನದ ಮೌಲ್ಯ ಪತ್ತೆ ಹಚ್ಚಲು ಅಕ್ಕಸಾಲಿಗನನ್ನ ಮನೆಗೆ ಕರೆಸಲಾಗಿದೆ.

Key words: ACB -attack – KAS officer- Sudha’s –house- found -large amounts – jewelry