ಹೊಸವರ್ಷ ಸಂಭ್ರಮಾಚರಣೆ ವೇಳೆ ದಾಂಧಲೆ, ಪಿಎಸ್ ಐಗೆ ನಿಂದನೆ ಆರೋಪ: ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರನ ಬಂಧನ…

ಮಂಡ್ಯ,ಜ,10,2020(www.justkannada.in): ನೂತನ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿ ಕೃಷ್ಣರಾಜಪೇಟೆ ಪಟ್ಟಣ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡರನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆಗೆ ಮುಂದಾಗಿದ್ದ  ಆರೋಪದ ಮೇಲೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಸಹೋದರರಾದ ಕೆ.ಬಿ.ಈಶ್ವರಪ್ರಸಾದ್ ಅವರನ್ನ ಬಂಧಿಸಲಾಗಿದೆ.

ನೂತನ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮುಂಜಾನೆ 2.15ರ ವರೆಗೂ ಕುಡಿದು ಮೋಜು ಮಸ್ತಿ ನಡೆಸುತ್ತಿದ್ದ ಇಬ್ಬರು ಸಹೋದರರನ್ನು ಪಾರ್ಟಿ ಮುಗಿಸಿ ಮನೆಗೆ ತೆರಳುವಂತೆ ಮನವಿ ಮಾಡಿದ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆಗೆ ಮುಂದಾಗಿದ್ದರು.

ಈ ಸಂಬಂಧ ಸ್ವತಃ ಬ್ಯಾಟರಾಯಗೌಡ ಅವರೇ ಪಟ್ಟಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಸಹೋದರರಾದ ಕೆ.ಬಿ.ಈಶ್ವರಪ್ರಸಾದ್ ಮತ್ತು ಕೆ.ಬಿ.ರವಿ ಅವರ ಮೇಲೆ ಎಫ್.ಐ.ಆರ್ ದಾಖಲಿಸಿ 10 ದಿನಗಳಲ್ಲಿ ಬಂಧಿಸಿರುವುದು ಕೆ.ಆರ್.ಪೇಟೆ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.

ಟೌನ್ ಕ್ಲಬ್ ಅಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ಬಿ.ಈಶ್ವರಪ್ರಸಾದ್ ಅವರಿಗೆ ಸೆಶನ್ಸ್ ಕೋರ್ಟ್ ಬೇಲ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಟ್ಟಣ ಪೋಲಿಸರು ಈಶ್ವರಪ್ರಸಾದ್ ಅವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕೆ.ಬಿ.ರವಿ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

 

Key words: abusing -PSI – threat – former MLA- KB Chandrasekhar- brother-Arrest