ಕಾರ್ತೀಕ ಮಾಸದ ಅಂಗವಾಗಿ ಬೆಟ್ಟದ ನಂದಿಗೆ ಮಹಾಭಿಷೇಕ

ಮೈಸೂರು, ನವೆಂಬರ್ 17, 2019 (www.justkannada.in):ಬೆಟ್ಟದ ಬಳಗ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಂದಿ ವಿಗ್ರಹಕ್ಕೆ ಮಹಾಭಿಷೇಕ ಇಂದು ನೆರವೇರಿತು.

ಪ್ರತೀವರ್ಷ ಕಾರ್ತಿಕಮಾಸದ ಮೂರನೇ ಭಾನುವಾರ ಆಚರಣೆ ಮಾಡಲಾಗುತ್ತದೆ. ದೊಡ್ಡನಂದಿ ವಿಗ್ರಕ್ಕೆ ಬೆಟ್ಟದಬಳಗ ದವತಿಯಿಂದ ೧೪ನೇವರ್ಷದ ಮಾಹಾಭಿಷೇಕವನ್ನು ನೆರವೇರಿಸಲಾಯಿತು.

ಆದಿಚುಂಚನಗಿರಿ ಶಾಖಾಮಠ ಮೈಸೂರು ಸೋಮಶೇಖರರ ಸ್ವಾಮಿಜಿಗಳು, ಹೊಸಮಠದ ಚಿದಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಮಹಾಭೀಷೇಕ ನಡೆಯಿತು. ಬೆಳಗ್ಗೆ ೯ಗಂಟೆಯಿಂದ ನಂದಿ ವಿಗ್ರಹದ ಪೋಜಾಕೈಂಕಾರ್ಯಗಳು ಪ್ರಾರಂಭವಾದವು.

ನಂದಿ ಮಹಾಭಿಷೇಕದಲ್ಲಿ ಹಾಲು500ಲೀಟರ್, ಮೊಸರು 200, 40ಕೇಜಿ ತುಪ್ಪ, ಅರಿಶಿಣ ಕುಂಕುಮ, ಗಂಧ ಚಂದನ, ವಿಭೂತಿ, ಬಾಳೆ ಹಣ್ಣು, ಕಲ್ಲುಸಕ್ಕೆರೆ, ಸೇಭಿನ ಹಣ್ಣು, ಹಸಿ, ಒಣ ದ್ರಾಕ್ಷಿ , ಜೇನು ತುಪ್ಪ, ಕಡಲೆ ಎಣ್ಣೆ, ಇತ್ಯಾದಿ ಸೇರಿ ಒಟ್ಟು 40ಬಗೆಯ ಧ್ರವ್ಯ ಹಾಗೂ ಹಣ್ಣುಗಳಿಂದ ಮಹಾಭಿಷೇಕ ಮಾಡಲಾಯಿತು.

ನಂದಿ ವಿಗ್ರಹದ ಮಹಾಭಿಷೇಕದಲ್ಲಿ ಧನಾಭಿಷೇಕ ವಿಶೇಷವಾದುದ್ದಾಗಿದೆ. ಭಕ್ತಾದಿಗಳು ನೀಡಿರುವ ಚಿಲ್ಲರೆ ಹಣವನ್ನು ನಂದಿ ವಿಗ್ರಹಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಲೋಕ ಕಲ್ಯಾಣರ್ಥವಾಗಿ ನಂದಿ ವಿಗ್ರಹ ಮಹಾಭಿಷೇಕ ಮಾಡಲಾಗುತ್ತದೆ. ಸುಮಾರು ನೂರು ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ನಂದಿವಿಗ್ರಹ ದಕ್ಷಿಣ ಭಾರತದಲ್ಲೇ ಹೆಚ್ಚು ಸುಂದರ ಹಾಗೂ ಬೃಹತ್ ಏಕ ಶಿಲೆ ನಂದಿ ವಿಗ್ರವಾಗಿದೆ.