ಸುಮಲತಾ ಬರ್ತ್ ಡೇ ದಿನ ಅಭಿಷೇಕ್ ಚಿತ್ರದ ರಿವೀಲ್ !

Promotion

ಬೆಂಗಳೂರು, ಆಗಸ್ಟ್ 25, 2022 (www.justkannada.in): ಮೊದಲ ಸಿನಿಮಾ ಅಮರ್ ಬಳಿಕ ಅಭಿಷೇಕ್ ಎರಡನೇ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ಆಫರ್‌ಗಳು ಅಭಿಯನ್ನು ಹುಡುಕಿಕೊಂಡು ಬರುತ್ತಿವೆ.

ಸದ್ಯ ದುನಿಯಾ ಸೂರಿ ನಿರ್ದೇಶನದಲ್ಲಿ ‘ಬ್ಯಾಡ್ ಮ್ಯಾನರ್ಸ್’ ನಿರ್ಮಾಣ ಆಗುತ್ತಿದೆ. ಈಗಾಗಲೇ ಬಹುತೇಕ ಸಿನಿಮಾ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.

ರೆಬೆಲ್ ಸ್ಟಾರ್ ಪುತ್ರನ ನಾಲ್ಕನೇ ಸಿನಿಮಾಗೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಲಿದೆ.

ಸ್ಯಾಂಡಲ್‌ವುಡ್‌ನಲ್ಲಿ ಕೆಲವು ದಿನಗಳಿಂದ ಮಹೇಶ್ ಕುಮಾರ್ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷ್‌ ಸಿನಿಮಾ ಕುರಿತು ಮಾತುಗಳು ಆರಂಭವಾಗಿದ್ದವು. ಅದೀಗ ಖಚಿತವಾಗಿದೆ.  ಸುಮಲತಾ ಬರ್ತ್‌ಡೇಗೆ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಲಿದೆ.

ಅಂಬಿ ಪುಣ್ಯಭೂಮಿಯಲ್ಲಿ ಅಭಿಷೇಕ್ ಅಂಬರೀಶ್ ನಾಲ್ಕನೇ ಸಿನಿಮಾದ ಫಸ್ಟ್ ಲುಕ್ ಹಾಗೂ ನಿರ್ಮಾಪಕರು ಯಾರು ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಲಿದೆ.