57ನೇ ವಸಂತಕ್ಕೆ ಕಾಲಿಟ್ಟ ಸುಮಲತಾ: ಅಮ್ಮನ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಷೇಕ್

ಬೆಂಗಳೂರು, ಆಗಸ್ಟ್ 27, 2020 (www.justkannada.in): ನಟಿ ಹಾಗೂ ಸಂಸದೆ ಸುಮಲತಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಅಮ್ಮನ ಹುಟ್ಟುಹಬ್ಬವನ್ನು ಅಭಿಷೇಕ್​ ಅಂಬರೀಷ್​ ಸಹ ಮನೆಯಲ್ಲಿ ವಿಶೇಷವಾಗಿ ಆಚರಿಸಿದ್ದಾರೆ. ಮನೆಯಲ್ಲಿ ಅಮ್ಮನ ಕೈಯಿಂದ ಕೇಕ್​ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿರುವ ಅಭಿಷೇಕ್​, ಒಂದು ಮುದ್ದಾದ ವಿಡಿಯೋ ಹಂಚಿಕೊಂಡಿದ್ದಾರೆ.

ಅಮ್ಮನ ಮೂಗಿಗೆ ಕೇಕ್​ ಮೆತ್ತುವ ಮೂಲಕ ಕೇಕ್​ ಎಂಜಾಯ್​ ಮಾಡಿದ್ರಾ ಅಂತಾ ತಮಾಷೆಯಾಗಿ ಕೇಳಿದ್ದಾರೆ. ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.