ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್- ಅವಿವಾ.

ಬೆಂಗಳೂರು,ಜೂನ್,5,2023(www.justkannada.in): ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಶ್  ಹಾಗೂ ಅವಿವಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ಮಾಣಿಕ್ಯ ಚಾಮರ ವಜ್ರದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಭಿಷೇಕ್ ಅಂಬರೀಶ್  ಅವರು ಅವಿವಾಗೆ ಮಾಂಗಲ್ಯಧಾರಣೆ ಮಾಡಿದರು. ಸೆಲೆಬ್ರಿಟಿಗಳು, ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹಕಾರ್ಯ ನೆರವೇರಿತು.

ಅಭಿಷೇಕ್ ಅಂಬರೀಶ್ ಮದುವೆ ಸಮಾರಂಭದಲ್ಲಿ  ಹಿರಿಯ ನಟ ಸೂಪರ್ ಸ್ಟಾರ್ ರಜನಿ ಕಾಂತ್, ಖ್ಯಾತ ನಟಿ ಸುಹಾಸಿನಿ ಟಾಲಿವುಡ್ ನಟ ಮೋಹನ್ ಬಾಬು, ಮನೋಜ್ ಮಂಚು ಮೊದಲಾದವರು ಉಪಸ್ಥಿತರಿದ್ದರು.

Key words: Abhishek Ambareesh – Aviva- married