ಎಬಿಡಿ ಮನೆಗೆ ಬಂದ ಹೊಸ ಅತಿಥಿ !

ಕೇಪ್ ‍ ಟೌನ್, ನವೆಂಬರ್ 21, 2020 (www.justkannada.in): ಸೌತ್ ಆಫ್ರಿಕಾದ ಮಾಜಿ ಆಟಗಾರ ಮತ್ತು ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

ಎಬಿ ಡಿವಿಲಿಯರ್ಸ್ ದಂಪತಿಗೆ ಇದೇ ತಿಂಗಳು 11ರಂದು ಹೆಣ್ಣು ಮಗುವಿನ ಜನನವಾಗಿದ್ದು, ಈ ವಿಚಾರವನ್ನು ಎಬಿಡಿ ಇಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ರೀವಿಲ್ ಮಾಡಿದ್ದಾರೆ. ಈಗಾಗಲೇ ವಿಲಿಯರ್ಸ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಈಗ ಹೆಣ್ಣು ಮಗು ಜನಿಸುವ ಮೂಲಕ ಮೂರನೇ ಮಗುವಿಗೆ ಎಬಿಡಿ ವೆಲ್‍ಕಮ್ ಹೇಳಿದ್ದಾರೆ.

ಈ ವಿಚಾರವಾಗಿ ಪತ್ನಿ ಮತ್ತು ಮಗುವಿನ ಜೊತೆ ಫೋಟೋ ಶೇರ್ ಮಾಡಿಕೊಂಡಿರುವ ವಿಲಿಯರ್ಸ್, ನವೆಂಬರ್ 11 ರಂದು ನಾವು ಸುಂದರವಾದ ಹೆಣ್ಣು ಮಗುವನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.