ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ದಕ್ಷಿಣ ಭಾರತದ ‘ ಹಾಟ್ ಸ್ಟಾರ್ ‘ ನಮಿತಾ.

kannada t-shirts

 

ಚೆನ್ನೈ, ಡಿ.02, 2019 : ( www.justkannada.in news ) ದಕ್ಷಿಣ ಭಾರತದ ಸಿನಿರಂಗದ ಹಾಟ್ ಸ್ಟಾರ್, ಬಹುಭಾಷಾ ನಟಿ ನಮಿತಾ ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಸಮ್ಮುಖದಲ್ಲಿ ನಟಿ ನಮಿತಾ ಪಕ್ಷ ಸೇರಿದರು.

ಈ ಮೊದಲು ಎಐಎಡಿಎಂಕೆ ಜತೆ ಗುರುತಿಸಿಕೊಂಡಿದ್ದ ಹಾಟ್ ಸ್ಟಾರ್ ನಮಿತಾ, ಕಳೆದ ಕೆಲ ಸಮಯದಿಂದ ಆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ AIADMK ತೊರೆದು ಬಿಜೆಪಿ ಸೇರಿದ್ದು, ಮತ್ತೆ ಸಕ್ರಿಯ ರಾಜಕೀಯ ಪ್ರವೇಶಿಸಿದ್ದಾರೆ.

2002ರಲ್ಲಿ ಟಾಲಿವುಡ್ ಮೂಲಕ ಬೆಳ್ಳಿ ಪರದೆ ಪ್ರವೇಶಿಸಿದ ನಮೀತಾ, ಕನ್ನಡದಲ್ಲಿ ‘ನೀಲಕಂಠ’, ‘ಹೂ’, ‘ನಮಿತಾ ಐ ಲವ್ ಯು’ ಚಿತ್ರಗಳಲ್ಲಿ ಮಾದಕ ಮೈಮಾಟದ ಮೂಲಕ ಕನ್ನಡಿಗರಿಗೂ ಚಿರಪರಿತರಾದರು. ನಟಿ ಖುಷ್ಬು ಮಾದರಿಯಲ್ಲೇ ನಮಿತಾಗೂ ಅಭಿಮಾನಿಗಳು ದೇವಸ್ಥಾನ ನಿರ್ಮಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು ಸಮೀಪ ಅಭಿಮಾನಿಗಳು ನಮಿತಾಗೆ ದೇಗುಲ ಕಟ್ಟಿಸಿದ್ದಾರೆ.


key words : A popular south indian actress, Namitha had joined BJP in presence of BJP National Working President JPNaddaji in Chennai.

website developers in mysore