ಸರಳ ವಿವಾಹವಾಗಿ ಸಿಎಂ, ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ಚಾಮರಾಜನಗರ ಜಿಲ್ಲೆಯ ಜೋಡಿ

ಬೆಂಗಳೂರು, ಏಪ್ರಿಲ್ 29, 2020 (www.justkannada.in): ಲಾಕ್‌ಡೌನ್ ನಡುವೆಯೂ ಸರಳ ವಿವಾಹವಾಗಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ದೇಣಿಗೆ ನೀಡಿದ ನವದಂಪತಿಗಳು.

ಚಾಮರಾಜನಗರ ತಾಲ್ಲೂಕಿನ ಹರವೆ ಗ್ರಾಮದ ಮೇಘನಾ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಚಂದ್ರಶೇಖರ್‌ಮೂರ್ತಿ ಗ್ರಾಮೀಣ ಸೊಗಡಿನ ಹಸಿರು ಚಪ್ಪರದಡಿ ಯಾವುದೇ ದುಂದುವೆಚ್ಚವಿಲ್ಲದೇ ಸರಳವಾಗಿ ಮದುವೆಯಾಗಿದ್ದಾರೆ. ಜೊತೆಗೆ ತಮ್ಮ ಮದುವೆ ಖರ್ಚಿನ ಹಣವನ್ನು ಕೋವಿಡ್ 19ನ ಸದುಪಯೋಗಕ್ಕೆ ಬಳಸಿಕೊಳ್ಳುವಂತೆ ಪ್ರಧಾನಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ 25 ಸಾವಿರ ಹಾಗೂ ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ 25 ಸಾವಿರ ಸೇರಿದಂತೆ ಒಟ್ಟು 50 ಸಾವಿರರೂಗಳ ದೇಣಿಗೆ ನೀಡಿ, ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ನವವಧುಗಳಾದ ಚಂದ್ರಶೇಖರ್‌ಮೂರ್ತಿ ಹಾಗೂ ಮೇಘನಾ ಮಾತನಾಡಿ ಕೊವಿಡ್ 19 ನ ಈ ಸಂದರ್ಭದಲ್ಲಿ ಪೋಷಕರ ಒಪ್ಪಿಗೆ ಪಡೆದು ನಾವು ಸರಳವಾಗಿ ವಿವಾಹವಾಗುವುದರ ಜೊತೆಗೆ ನಮ್ಮ ಮದುವೆ ಖರ್ಚಿನ 50 ಸಾವಿರರೂಗಳ ಹಣವನ್ನು ಹಣವನ್ನು ಕೋವಿಡ್ 19ನ ಸದುಪಯೋಗಕ್ಕೆ ಬಳಸಿಕೊಳ್ಳುವಂತೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ದೇಣಿಗೆ ನೀಡಿದ್ದೇವೆ ಎಂದು ಹೇಳಿದರು.