ಅಧಿಕಾರಿಗಳೂ ಭ್ರಷ್ಟರಾದರೆ ಭಾರತದ ಅಭಿವೃದ್ಧಿ ಹೇಗೆ ಸಾಧ್ಯ…? -ಇಂದಿನ ರಾಜಕೀಯ ಪರಿಸ್ಥಿತಿ ಬಗ್ಗೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಸಮಾಧಾನ..

kannada t-shirts

ಮೈಸೂರು,ಡಿ,14,2019(www.justkannada.in): ಇಂದಿನ ರಾಜಕೀಯ ಪರಿಸ್ಥಿತಿ ತುಂಬಾ ಬದಲಾವಣೆಯಾಗಿದೆ. ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕಿ ಭವ್ಯ ಸ್ವಾಗತ ನೀಡಲಾಗುವ ಮಟ್ಟಿಗೆ ಬದಲಾಗಿದೆ. ಇಂದಿನ ಪೀಳಿಗೆಯ ಯುವ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

ಮೈಸೂರಿನ ಕೆ.ಎಸ್.ಓ.ಯು. ಕಾವೇರಿ ಸಭಾಂಗಣದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟದಿಂದ 8ನೇ ರಾಜ್ಯ ಸಮ್ಮೇಳನ ನಡೆಯುತ್ತಿದ್ದು AILUನ ಅಧ್ಯಕ್ಷ ಭಿಕಾಸ್ ರಂಜನ್ ಭಟ್ಟಾಚಾರ್ಯ ಹಾಗೂ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಕಾರ್ಯಕ್ರಮವನ್ನ ಉದ್ಘಾಟಿಸಿದರು.

ಬಳಿಕ ಮಾತನಾಡಿದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ , ಇಂದಿನ ರಾಜಕೀಯ ಪರಿಸ್ಥಿತಿ ತುಂಬಾ ಬದಲಾವಣೆಯಾಗಿದೆ.  ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕಿ ಭವ್ಯ ಸ್ವಾಗತ ನೀಡಲಾಗುವ ಮಟ್ಟಿಗೆ ಬದಲಾಗಿದೆ. ಇಂದಿನ ಪೀಳಿಗೆಯ ಯುವ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ಅವರೂ ಸಾಮಾಜೀಕ ಮೌಲ್ಯಗಳನ್ನು ಕಳೆದು ಕೊಳ್ಳುತ್ತಾರೆ. ಇದನ್ನು ಬದಲಾವಣೆ ಮಾಡಲು ನನ್ನ ಕಾಲವಧಿ ಸಾಕಾಗುವುದಿಲ್ಲ. ಆದರೂ ಸಹ ನನ್ನ ಪ್ರಯತ್ನಗಳನ್ನು ನಾನು ಮಾಡಿತ್ತೇನೆ ಎಂದರು.

2ಜೀ ಹಗರಣ, ಕಾಮನ್‌ವೆಲ್ತ್ ಹಗರಣ, ಕಲ್ಲಿದ್ದಲು ಹಗರಣಗಳಿಂದ ಹಣ ಸಂಪೂರ್ಣ ಸೋರಿಕೆಯಾಗಿದೆ. ಅಧಿಕಾರಿಗಳ ದುರಾಸೆಯಿಂದ ಈ ರೀತಿಯ ಹಣ ಸೋರಿಕೆಯಾಗುತ್ತಿದೆ. ಅಧಿಕಾರಿಗಳೂ ಭ್ರಷ್ಟರಾದರೆ ಭಾರತದ ಅಭಿವೃದ್ಧಿ ಹೇಗೆ ಸಾಧ್ಯ…? ಎಂದು ಪ್ರಶ್ನಿಸಿದರು.

ನಮ್ಮಲ್ಲಿ ಈಗ ಮಾನವೀಯ ಮೌಲ್ಯಗಳನ್ನು ಮಾಯವಾಗಿತ್ತಿದೆ. ಹಿರಿಯರು ಮಾನವೀಯ ಮೌಲ್ಯಗಳನ್ನು ನಮಗೆ ನೀಡಿದ್ದರು. ಆದರೆ ಇಂದು ಅದು ಸಂಪೂರ್ಣ ಬದಲಾವಣೆಯಾಗಿದೆ‌ ಎಂದು ಸಂತೋಷ ಹೆಗ್ಡೆ ಅಸಮಾಧಾನ ಹೊರಹಾಕಿದರು.

ಭಾರತವೂ ಈಗ ಗಾಂಧಿ ಹಾಗೂ ಅಂಬೇಡ್ಕರ್ ಚಿಂತಿಸಿದ ಭಾರತವಾಗಿಲ್ಲ- ಭಿಕಾಸ್ ರಂಜನ್ ಭಟ್ಟಾಚಾರ್ಯ..

ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ AILUನ ಅಧ್ಯಕ್ಷ ಭಿಕಾಸ್ ರಂಜನ್ ಭಟ್ಟಾಚಾರ್ಯ, ಭಾರತವೂ ಈಗ ಗಾಂಧಿ ಹಾಗೂ ಅಂಬೇಡ್ಕರ್ ಚಿಂತಿಸಿದ ಭಾರತವಾಗಿಲ್ಲ. ಇಂದು ಭಾರತ ಜಾತಿಗಳ ಯುದ್ದದಿಂದ ಕೂಡಿದೆ. ಅಂಬೇಡ್ಕರ್ ರಾಜಕೀಯ ಶಕ್ತಿಯಿಂದ ಭಾರತದಲ್ಲಿ ಅಭಿವೃದ್ಧಿ ಸಾಧ್ಯ ಎಂದಿದ್ದರು. ಆದ್ರೇ ಜಾತಿ ವ್ಯವಸ್ಥೆ ರಾಜಕೀಯದಲ್ಲಿ ಬೆರೆತು ಹಳ್ಳ ಹಿಡಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಕೆಲವು ಬದಲಾವಣೆಯಾಗಬೇಕಾದರೆ ನಾವು ವಕೀಲರೂ ಮಾಡಬೇಕು. ನಮ್ಮಿಂದಲೇ ದೇಶದಲ್ಲಿ ಕೆಲವು ಬದಲಾವಣೆಯಾಗಬೇಕು. ವಕೀಲರು ಸಮಾಜದ ಇಂಜಿನಿಯರ್ ಇದ್ದಾಹಾಗೇ. ನಾವೇ ದೇಶದ ಅಭಿವೃದ್ಧಿಗೆ ಹಾಗೂ ಸಂವಿಧಾನದ ಆಶಯಗಳನ್ನು ಬೆಳಸಬೇಕಿದೆ. ಭಾರತದಲ್ಲಿ 29 ಲಕ್ಷ ವಕೀಲರು  ಅಭ್ಯಸಿಸುತ್ತಿದ್ದಾರೆ. ನಾವು ಮನಸ್ಸು ಮಾಡಿದರೇ ಎಲ್ಲವೂ ಸಾಧ್ಯ ಎಂದು ಮಾಜಿ ಅಡ್ವಕೇಟ್ ಜನರಲ್ (ಪಶ್ವಿಮ ಬಂಗಾಳ) ಭಿಕಾಸ್ ರಂಜನ್ ಭಟ್ಟಾಚಾರ್ಯ ನುಡಿದರು.

Key words: 8th State Conference – Federation of Lawyers of India-mysore- santhosh Hegde- Bhikas Ranjan Bhattacharya.

website developers in mysore