ಮೈಸೂರಿನ ಐಶ್ (AIISH)ನಲ್ಲಿ ಅ.30ರಿಂದ 8ನೇ ಅಖಿಲ ಭಾರತ ರಾಜಭಾಷಾ ಸಮ್ಮೇಳನ…

ಮೈಸೂರು,ಅ,28,2019(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ  ಅಕ್ಟೋಬರ್ 30ರಿಂದ ಎಂಟನೆಯ ಅಖಿಲ ಭಾರತ ರಾಜಭಾಷಾ ಸಮ್ಮೇಳನ ನಡೆಯಲಿದೆ.

ಅಕ್ಟೋಬರ್ 30 ಮತ್ತು  ನವೆಂಬರ್ 1 ವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಎಂಟನೆಯ ಅಖಿಲ ಭಾರತ ರಾಜಭಾಷಾ ಸಮ್ಮೇಳನವು ಜರುಗಲಿದೆ. ‘ಭಾರತ, ಭಾರತೀಯತೆ ಹಾಗೂ ಭಾರತೀಯ ಭಾಷೆಗಳ ಶ್ರ್ರೇಷ್ಠತೆ’ಯನ್ನು ಎತ್ತಿಹಿಡಿಯುವುದು ಸಮ್ಮೇಳನದ ಮುಖ್ಯ ಉದ್ದೇಶ. ಸಾಮಾಜಿಕ – ಸಾಂಸ್ಕೃತಿಕ, ವೈಜ್ಞಾನಿಕ ಮತ್ತಿತರ ವಿಶೇಷ ಕ್ಷೇತ್ರಗಳನ್ನೊಳಗೊಂಡಂತೆ ವಿಭಿನ್ನ ಭಾರತೀಯ ಭಾಷೆಗಳ ಪರಸ್ಪರ ಸಂಬಂಧಗಳನ್ನು ಬೆಸೆಯುವುದೇ ಸಮ್ಮೇಳನದ ಮೂಲ ಮಂತ್ರ.

ಡಾ. ಎಮ್. ಪುಷ್ಪಾವತಿ, ನಿರ್ದೇಶಕರು 30 ಅಕ್ಟೋಬರ್ 2019 ರಂದು ಬೆಳಿಗ್ಗೆ 9.30 ಕ್ಕೆ ಸೆಮಿನಾರ್ ಹಾಲಿನಲ್ಲಿ ಏರ್ಪಡಿಸುವ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಡಾ. ಚಂದ್ರಭೂಷಣ ತ್ರಿಪಾಠಿ, IAS, ವಿಶೇಷ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ, ಉತ್ತರ ಪ್ರದೇಶ ಸರ್ಕಾರ, ಲಖ್ನೊ ಅವರು ಸಮಾರಂಭದ ಮುಖ್ಯಅತಿಥಿಗಳಾಗಿ  ಆಗಮಿಸುವರು.

ಸಮ್ಮೇಳನವು ಡಾ. ವೇದಪ್ರಕಾಶ ದೂಬೆ, ನಿರ್ದೇಶಕರು (ರಾ ಭಾ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಶ್ರೀ ರಾಜೇಶ್ ಶ್ರೀವಾಸ್ತವ್, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಉಪ ನಿರ್ದೇಶಕರು (ರಾ ಭಾ) ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.  ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿರುವ ಪ್ರಸಕ್ತ ಸಮ್ಮೇಳನವು ದೇಶದ ಎಲ್ಲೆಡೆಗೆ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾಗದಲ್ಲಿರುವ ವಿಭಿನ್ನ ಸಾಮಾಜಿಕ-ಸಾಂಸ್ಕೃತಿಕ ಪರಿಸರಗಳನ್ನೊಳಗೊಂಡ ಜನರನ್ನು ಒಂದುಗೂಡಿಸುತ್ತಾ ರಾಜಭಾಷೆಯ ಮಹತ್ವವನ್ನು ಪಸರಿಸುವ ವೇದಿಕೆಯಾಗಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಪ್ರಖ್ಯಾತ ವಿದ್ವಾಂಸರು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವರು.

ಡಾ. ಚಂದ್ರಭೂಷಣ ತ್ರಿಪಾಠಿ, ಐ ಎ ಎಸ್ ರವರು ಸಂಸ್ಕೃತವು ಭಾರತೀಯ ಎಲ್ಲಾ ಭಾಷೆಗಳ ಮೂಲ ಎಂಬುದನ್ನು ಕುರಿತು ಹೇಳುವರು. ಡಾ. ಲಕ್ಷ್ನೀನಾರಾಯಣ ಅರೋರ, ವಿಶ್ರಾಂತ ಪ್ರಾಧ್ಯಾಪಕ ಹಾಗೂ ನಿರ್ದೇಶಕರು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ ಇವರು ಹಿಂದಿ ಭಾಷೆ ಹಾಗೂ ಸಾಹಿತ್ಯಗಳ ಪ್ರಚಾರ – ಪ್ರಸಾರ ಮಾಡುವ ದಿಕ್ಕಿನಲ್ಲಿ ಕನ್ನಡದ ಸಾಹಿತಿಗಳು, ವಿದ್ವಾಂಸರು ಮತ್ತ್ತು ಭಾಷಾವಿದರ ಕೊಡುಗೆಯ ಬಗ್ಗೆ ಮಾತನಾಡುವರು. ಡಾ. ವೇದಪ್ರಕಾಶ್ ದೂಬೆ, ನಿರ್ದೇಶಕರು ಭಾರತೀಯ ಸಂವಿಧಾನದ ಪ್ರಕಾರ ರಾಜಭಾಷೆ ಹಿಂದಿಯನ್ನು ಅನುಸರಿಸುವಿಕೆಯನ್ನು ಕುರಿತಂತೆ ಹಾಗೂ ಜಾಗತಿಕ ಹಿನ್ನೆಲೆಯಲ್ಲಿ ಹಿಂದಿ ಭಾಷೆ ಮತ್ತು ಭಾರತೀಯ ಸಂಸ್ಕೃತಿಯ ಹಿರಿಮೆ – ಗರಿಮೆಗಳನ್ನು ತಿಳಿಯಪಡಿಸುವರು.

ಇನ್ನು ರಾಜೇಶ್ ಶ್ರೀವಾಸ್ತವರು ಹಿಂದಿ ಸಾಫ್ಟ್ ವೇರ್ ಮತ್ತು ಬೆರಳಚ್ಚುಗಳ ಬಗೆಗಿನ ಹೊಸ ಹೊಸ ತಿರುವುಗಳ ಅರಿವು ಮೂಡಿಸುತ್ತಾ, ಪ್ರಾಯೋಗಿಕ ಅಭ್ಯಾಸಗಳ ಮೂಲಕ ಹಿಂದಿ ಭಾಷೆಯ ಸರಿಯಾದ ಉಪಯೋಗದ ಬಗ್ಗೆ ತಿಳಿಸುವರು. ಭಾಷಾ ವಿಧಾನಗಳ ಕುರಿತು ಹೇಳುವ ಮಾತುಗಳಲ್ಲದೆ ದೇಶದ ವಿವಿಧೆಡೆಗಳಿಂದ ಸಮ್ಮೇಳನದಲ್ಲಿ ಭಾಗವಹಿಸುವವರಿಗಾಗಿ ಸಂಸ್ಥೆಯ ಪರಿಣತರು ವಾಕ್ ಶ್ರ್ರವಣ ವಿಷಯಗಳ ಬಗ್ಗೆ ಹಿಂದಿ ಭಾಷೆಯಲ್ಲಿ ಮಾಹಿತಿ ನೀಡುವರು. ಡಾ. ಎನ್. ಸ್ವಪ್ನ, ಸಹ ಪ್ರಾಧ್ಯಾಪಕರು ‘ವಾಕ್ ಮತ್ತು ಭಾಷೆ – ಕಾರಣಗಳು ಹಾಗೂ  ವಿವಿಧೋಪಚಾರಗಳು’ ಎಂಬ ವಿಷಯವಾಗಿ ಹಾಗೂ ಡಾ. ಸುಜೀತ್ ಕುಮಾರ್, ಸಹ ಪ್ರಾಧ್ಯಾಪಕರು ‘ಶ್ರ್ರವಣ ಸಮಸ್ಯೆಗಳು ಮತ್ತು ಅವುಗಳ ಪರಿಹಾರ ವಿಧಿ’ಎಂಬುದರ ಬಗ್ಗೆ  ಮಾತನಾಡುವರು.

key words:  8th All India Rajabasha Conference –mysore- AIISH