ಮೈಸೂರಿನಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘದ 71ನೇ ಸ್ಥಾಪನಾ ದಿನಾಚಾರಣೆ: ಪ್ರತಿಜ್ಞಾ ವಿಧಿ ಸ್ವೀಕಾರ.

ಮೈಸೂರು,ಜುಲೈ,1,2021(www.justkannada.in): ಅಖಿಲ ಭಾರತ ವಿಮಾ ನೌಕರರ ಸಂಘದ 71ನೇ ಸ್ಥಾಪನಾ ದಿನವನ್ನು ಇಂದು (ಜುಲೈ 1) ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.jk

ಅಂತೆಯೇ ಮೈಸೂರು ವಿಭಾಗೀಯ ಕಛೇರಿ ಬಳಿ ನಡೆದ ಕಾರ್ಯಕ್ರಮದಲ್ಲಿ ವಿಮಾ ನಿಗಮ ನೌಕರರ ಸಂಘ, ಮೈಸೂರು ವಿಭಾಗದ ಅಧ್ಯಕ್ಷ ರಾದ ಸಂಗಾತಿ ಎಸ್. ಕೆ. ರಾಮು ಸಂಘದ ಧ್ವಜಾರೋಹಣ ಮಾಡಿದರು. ವಿಮಾ ನಿಗಮ ನೌಕರರ ಸಂಘ, ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಸಂಗಾತಿ ಎಸ್. ಎಸ್. ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಂಗಾತಿ ಎನ್. ಕೆ. ಬಾಲಾಜಿ ರಾವ್ ಪ್ರತಿಜ್ಞಾ ವಿಧಿ ಬೋಧಿಸಿದರು.  ಅಖಿಲ ಭಾರತ ವಿಮಾ ನೌಕರರ ಸಂಘದ ಧ್ವಜಾರೋಹಣ ನೆರವೇರಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

1951 ರ ಜುಲೈ 1ರಂದು ಸ್ಥಾಪನೆಗೊಂಡ ಈ ಸಂಘಟನೆಯು ಆಗ ಖಾಸಗಿ ರಂಗದಲ್ಲಿದ್ದ ವಿಮಾ ಕ್ಷೇತ್ರವನ್ನು ರಾಷ್ಟ್ರೀಕರಣ ಮಾಡಬೇಕು ಮತ್ತು ಆ ಮೂಲಕ ಭಾರತ ದೇಶದ ಅಭಿವೃದ್ಧಿಗೆ ಅವಶ್ಯವಿರುವ ಸಂಪನ್ಮೂಲ ಕ್ರೋಢೀಕರಣವಾಗುತ್ತದೆ ಎಂದು ಒತ್ತಾಯಿಸಿ ಆಂದೋಲನ ನಡೆಸಿದ್ದನ್ನು ಮತ್ತು ಐದು ವರ್ಷಗಳ ಬಳಿಕ 1956ರಲ್ಲಿ ಅಂದಿನ ಕೇಂದ್ರ ಸರ್ಕಾರ ಜೀವವಿಮೆಯನ್ನು ರಾಷ್ಟ್ರೀಕರಣಗೊಳಿಸುವ ಸುಗ್ರೀವಾಜ್ಞೆ ಹೊರಡಿಸಿದ್ದನ್ನು, ವಿಮಾ ನೌಕರರ ಬೇಡಿಕೆಗಳ ಈಡೇರಿಕೆಯ ಹೋರಾಟದ ಜೊತೆಜೊತೆಯಲ್ಲಿ LIC ಮತ್ತು ಸಾಮಾನ್ಯ ವಿಮಾ ರಂಗವನ್ನು ಸಾರ್ವಜನಿಕ ವಲಯದಲ್ಲಿಯೇ ಉಳಿಸಿಕೊಳ್ಳಲು ನಿರಂತರ ಆಂದೋಲನ ನಡೆಸಿಕೊಂಡು ಬರುತ್ತಿರುವುದನ್ನು ಈ ಸಂದರ್ಭದಲ್ಲಿ ನೆನೆಯಲಾಯಿತು.

Key words: 71st Anniversary – All India Insurance Employees Association – Mysore-oath.