ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ 700 ಕೋಟಿ ನಷ್ಟ-ಡಿಸಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ…

kannada t-shirts

ಕೊಡಗು,ಆ,15,2019(www.justkannada.in):  ಕೊಡಗಿನಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಅತಿವೃಷ್ಟಿಯಿಂದ ಸುಮಾರು 700 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್,  ಜಿಲ್ಲೆಯಲ್ಲಿ ಎಲ್ಲಾ ಕಡೆ ಸರ್ವೆ ಕಾರ್ಯ ನಡೆಯುತ್ತಿದೆ. ಪ್ರವಾಹದಿಂದಾಗಿ ಜಿಲ್ಲೆಯಲ್ಲಿ 158 ಮನೆಗಳು ನೆಲಸಮವಾಗಿವೆ. ಮನೆ ಸಂಪೂರ್ಣ ನೆಲಸಮವಾದ್ರೆ 1 ಲಕ್ಷ ಪರಿಹಾರ ನೀಡಲಾಗುತ್ತದೆ. ಸಂತ್ರಸ್ತ ಕೇಂದ್ರಗಳಲ್ಲಿರುವ 4 ಸಾವಿರಕ್ಕೂ ಹೆಚ್ಚು ಮಂದಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ತೋರದಲ್ಲಿ ನಾಪತ್ತೆಯಾದ 6 ಮಂದಿ ಹುಟುಕಾಟಕ್ಕೆ ಕಾರ್ಯಚರಣೆ ವಿಳಂಬ ಹಿನ್ನಲೆ. ರಾಜ್ಯ ಸರ್ಕಾರ ಮತ್ತು ಕೇಂದ್ರಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಎಕ್ಸ್ಪರ್ಟ್ ಟೀಂ ಕೊಡಗಿಗೆ ಕಳುಹಿಸೊ ಸಂಬಂಧ ಪತ್ರ‌ ಬರೆಯಲಾಗಿದೆ. ಆರು ಮಂದಿ ಹುಡುಕಾಟಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.ಆದ್ರೆ ತೋರದಲ್ಲಿ ಸಂಪೂರ್ಣ ಮಣ್ಣು ಇದ್ದು, ಕೆಸರು ತುಂಬಿದೆ, ಹಿಟಾಚಿಯಿಂದ ಕಾರ್ಯಚರಣೆ ಕಷ್ಟವಾಗಿದೆ. ಪರಿಣಿತರ ಟೀಂ ಮೂಲಕ ಹುಡುಕೊ ಸಂಬಂಧ ಚಿಂತನೆ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.

Key words: 700 crore -loss -due – natural disaster – Kodagu-DC

website developers in mysore