ತಿ.ನರಸೀಪುರ ತಾಲ್ಲೂಕಿನಲ್ಲಿ ಮತ್ತೆ 7 ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆ…

Promotion

ಮೈಸೂರು,ಜು,14,2020(www.justkannada.in): ಮೈಸೂರಿನ ಗ್ರಾಮಾಂತರ ಭಾಗಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಅತಂಕ ಸೃಷ್ಠಿಸಿದ್ದು ಇದೀಗ ಮತ್ತೆ ತಿ.ನರಸೀಪುರ ತಾಲ್ಲೂಕಿನಲ್ಲಿ 7 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.jk-logo-justkannada-logo

ತಿ.ನರಸೀಪುರ ತಾಲ್ಲೂಕಿನಲ್ಲಿ ಕೊರೊನ ಸೋಂಕಿತರ ಸಂಖ್ಯೆ ಮುಂದುವರೆದಿದ್ದು, ತಾಲ್ಲೂಕಿನಲ್ಲಿ ಮತ್ತೆ 7 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಬನ್ನೂರು ಪಟ್ಟಣ ಒಂದರಲ್ಲೇ 4  ಕೊರೋನಾ ಕೇಸ್ ಪತ್ತೆಯಾಗಿದ್ದು  ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಬನ್ನೂರು ಪಟ್ಟಣದ ಮೂವರಿಗೆ ಕೊರೋನಾ ದೃಢವಾಗಿದೆ.7-new-corona-positive-case-detected-again-mysore-t-narasipura-taluk

ಬನ್ನೂರು ಪಟ್ಟಣದ ಗರ್ಭಿಣಿ ಮಹಿಳೆಗೆ ಪಾಸಿಟಿವ್ ಬಂದಿದೆ. ಇನ್ನೊಂದೆಡೆ ತಾಲೂಕಿನ ಅತ್ತಹಳ್ಳಿ ಗ್ರಾಮದ 43 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಮಾದಿಗಹಳ್ಳಿ,ಹಿಟ್ಟುವಳ್ಳಿ ಮತ್ತು ಗರ್ಗೇಶ್ವರಿ ಗ್ರಾಮದಲ್ಲಿ ತಲಾ ಒಂದೊಂದು ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಕೊರೊನ ಸೋಂಕಿತ ವ್ಯಕ್ತಿಗಳನ್ನ  ಕೋವಿಡ್ 19 ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

Key words: 7 New Corona -Positive Case -Detected -Again –mysore- T. Narasipura Taluk.