ರಾಜ್ಯದಲ್ಲಿ ಮಳೆಯಿಂದಾಗಿ 64 ಮಂದಿ ಸಾವು, 14 ಜಿಲ್ಲೆಗಳಿಗೆ ತೊಂದರೆ- ಮಳೆಹಾನಿ ಬಗ್ಗೆ ವಿವರ ನೀಡಿದ ಸಚಿವ ಆರ್.ಅಶೋಕ್.

Promotion

ಮಂಡ್ಯ,ಆಗಸ್ಟ್,4,2022(www.justkannada.in): ರಾಜ್ಯದಲ್ಲಿ ಮಳೆಯಿಂದಾಗಿ 64 ಮಂದಿ ಸಾವನ್ನಪ್ಪಿ 14 ಜಿಲ್ಲೆಗಳಿಗೆ ತೊಂದರೆಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ಮಳೆಹಾನಿ ಪರಿಶೀಲನೆ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್,  ಭಾರಿ ಮಳೆಯಿಂದಾಗಿ 14,956 ಜನರು  ಪ್ರವಾಹ ಪೀಡಿತರಾಗಿದ್ದಾರೆ. 608 ಮನೆ ಸಂಪೂರ್ಣ ಹಾಗೂ 2450 ಮನೆಗಳು ಭಾಗಶಃ ಹಾನಿಯಾಗಿವೆ.  8057 ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದರು.

ಕಾಳಜಿ ಕೇಂದ್ರದಲ್ಲಿ 6933 ಜನರಗೆ ಆಶ್ರಯ ನೀಡಲಾಗಿದೆ.  ರಾಜ್ಯದಲ್ಲಿ 18,280 ಹೆಕ್ಟೇರ್ ಕೃಷಿ ಜಮೀನು 4500 ತೋಟಗಾರಿಕೆ ಬೆಳೆ ನಾಶವಾಗಿದೆ.  1392 ಕಿ.ಮೀ ರಸ್ತೆ ಹಾನಿ, 61 ಕೆರೆ ಹಾನಿಯಾಗಿವೆ.  299 ಸೇತುವೆ ಹಾಗೂ 4223 ಶಾಲೆಗಳಿಗೆ ಮಳೆಯಿಂದ ತೊಂದರೆಯಾಗಿದೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

Key words:  64 people -died – rain – state,-14 districts – affected-Minister -R. Ashok