ಪ್ರವಾಹದಿಂದ 6.3 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶ-ನೆರೆ ಹಾನಿ ಬಗ್ಗೆ ಪ್ರಾಥಮಿಕ ವರದಿ ನೀಡಿದ ಸಚಿವ ಆರ್.ಅಶೋಕ್

ಬೆಂಗಳೂರು,ಅಕ್ಟೋಬರ್,22,2020(www.justkannada.in):  ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯಿಂದಾಗಿ  ಅಪಾರ ನಷ್ಟ ಉಂಟಾಗಿದ್ದು ರಾಜ್ಯದ ನೆರೆ ಹಾನಿ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.jk-logo-justkannada-logo

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ನೆರೆಯಿಂದಾಗಿ ಪ್ರವಾಹದಿಂದ 6.3 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಸುಮಾರು 12,700 ಮನೆಗಳಿಗೆ ಹಾನಿಯಾಗಿದ್ದು ಅಕ್ಟೋಬರ್ ನಲ್ಲಿ ಪ್ರವಾಹಕ್ಕೆಸಿಲುಕಿ 10 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 993 ಜಾನುವಾರುಗಳಿ ಮೃತಪಟ್ಟಿವೆ. ಈ ವರೆಗೆ 136 ಗ್ರಾಮಗಳ 4358 ಜನರನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. 5016 ಸಂತ್ರಸ್ತರನ್ನ ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.6-3-lakh-hectares-crop-destroyed-floods-minister-r-ashok-who-i-preliminary-report

ರಾಜ್ಯದಲ್ಲಿ 25 ಜಿಲ್ಲೆಗಳ 173 ತಾಲ್ಲೂಕುಗಳನ್ನ ನೆರೆಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ. ಈ ಪೈಕಿ 14 ತಾಲ್ಲೂಕುಗಳ 247 ಗ್ರಾಮಗಳನ್ನು ನೆರೆಪೀಡಿತ ಗ್ರಾಮಗಳು ಎಂದು ಘೋಷಣೆ ಮಾಡಲಾಗಿದೆ.  ಸಂತ್ರಸ್ತರಿಗೆ ಆಶ್ರಯ ನೀಡಲು 230 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಅಲ್ಲಿ ಪೌಷ್ಟಿಕಯುಕ್ತ ಆಹಾರವನ್ನ ನೀಡಲಾಗುತ್ತಿದೆ. ಕಾಳಜಿ ಕೇಂದ್ರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words: 6.3 lakh -hectares – crop- destroyed- floods-Minister- R. Ashok,preliminary report