55 ವರ್ಷ ಮೆಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲೆ ಕರ್ತವ್ಯ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಮುಂಬೈ, ಮೇ 22, 2020 (www.justkannada.in): ಬೆಂಗಳೂರಿನ ಕಾನಿಟೆಸ್ಬೆಬಲ್ ಕೊರೊನಾ ಸೋಂಕು ವಿಚಾರಕ್ಕೆ ಸಂಬಂಧಪಟ್ಟಂತೆ ಪೇದೆ ಎಷ್ಟು ಜನರ ಸಂಪರ್ಕ ಮಾಡಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಮೈಸೂರಿನಲ್ಲಿ ಗೃಹಸಚಿವ ಬಸವರಾಜ ಬೋಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಪೇದೆ ಎಷ್ಟು ಜನರನ್ನು ಸಂಪರ್ಕಿಸಿದ್ದಾರೆ ಎಂಬ ಆಧಾರದ ಮೇಲೆ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಬೇಕೋ ಬೇಡವೋ ಅನ್ನೋದು ತೀರ್ಮಾನ ಆಗುತ್ತದೆ. ನಾವು ಎಲ್ಲ ಸುರಕ್ಷತಾ ಕ್ರಮ ಕೈಗೊಂಡ ನಡುವೆಯೂ ಇಲಾಖಾ ಸಿಬ್ಬಂದಿಗೆ ಸೋಂಕು ಬಂದಿದೆ. ಹೀಗಾಗಿ ಹೊಸ ಸೂಚನೆಗಳನ್ನ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

55 ವರ್ಷ ಮೆಲ್ಪಟ್ಟ ಸಿಬ್ಬಂದಿಗಳಿಗೆ ಠಾಣೆಯಲ್ಲೆ ಕರ್ತವ್ಯ ನಿಯೋಜಿಸಬೇಕು. ವೈಜ್ಞಾನಿಕವಾಗಿ ಶಿಫ್ಟ್ ಬದಲಾವಣೆ ಮಾಡಬೇಕು. ನಮ್ಮ ಪೊಲೀಸರ ಸಂರಕ್ಷಣೆ ಗೃಹ ಇಲಾಖೆಯ ಜವಬ್ದಾರಿ ಎಂದು ಮೈಸೂರಿನಲ್ಲಿ ಗೃಹಸಚಿವ ಬಸವರಾಜ ಬೋಮ್ಮಾಯಿ ಹೇಳಿದ್ದಾರೆ.