ಬೆಂಗಳೂರು ವಿಭಾಗದಿಂದ  50ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ನಿರ್ಗಮನ

ಬೆಂಗಳೂರು, ಜೂನ್, 4, 2021  (www.justkannada.in): ಕೇಂದ್ರದಿಂದ ಕರ್ನಾಟಕಕ್ಕೆ ಕಳುಹಿಸಿದಂತಹ 25ನೇ ಆಕ್ಸಿಜನ್ ಎಕ್ಸ್ ಪ್ರೆಸ್ ಸ್ ರೈಲು (ಆಮ್ಲಜನಕದ ಬೋಗಿಗಳ ರೈಲು) ಇಂದು ಬೆಂಗಳೂರಿಗೆ ಆಗಮಿಸಿತು. ಅದೇ ರೀತಿ ಬೆಂಗಳೂರು ವಿಭಾಗದಿಂದ 25ನೇ ಆಕ್ಷಿಜನ್ ಎಕ್ಸ್ ಪ್ರೆಸ್  ರೈಲು ಇಂದು ನಗರದಿಂದ ನಿರ್ಗಮಿಸಿತು. ಈ ಪ್ರಕಾರವಾಗಿ ಬೆಂಗಳೂರು ರೈಲ್ವೆ ವಿಭಾಗದಿಂದ ನಿರ್ವಹಿಸಲ್ಪಟ್ಟಿರುವಂತಹ ಒಟ್ಟು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಸಂಖ್ಯೆ ಬರೋಬ್ಬರಿ ಅರ್ಧ ಶತಕವನ್ನು ಬಾರಿಸಿದಂತಾಗಿದೆ!jk

ಕೋವಿಡ್ ಸಾಂಕ್ರಾಮಿಕದ 2ನೇ ಅಲೆ ಇಡೀ ದೇಶವನ್ನೇ ಕಾಡುತ್ತಿದ್ದು, ರಾಜ್ಯವೂ ಇದರಿಂದ ಹೊರತಾಗಿಲ್ಲ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಒಂದು ದೊಡ್ಡ ಸಮಸ್ಯೆ ಹಾಗೂ ನಿರ್ವಹಣೆ ದೊಡ್ಡ ಸವಾಲಾಗಿತ್ತು. ಕೇಂದ್ರ ಸರ್ಕಾರ ಈ ಕೊರತೆಯನ್ನು ನೀಗಿಸಲು ದೇಶದೊಳಗಿನ ವೈದ್ಯಕೀಯ ಆಮ್ಲಜನಕ  ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುವುದರ ಜೊತೆಗೆ ಹೊರ ದೇಶಗಳಿಂದಲೂ ಆಮ್ಲಜನಕವನ್ನು ಆಮದು ಮಾಡಿಕೊಂಡಿತು. ದೇಶದ ಎಲ್ಲಾ ರಾಜ್ಯಗಳಿಗೂ ಶೀಘ್ರವಾಗಿ ಆಮ್ಲಜನಕವನ್ನು ತಲುಪಿಸಲು ವಿಶೇಷ ಇಂಧನ ಸಾಗಿಸುವ ಬೋಗಿಗಳಿರುವ ರೈಲುಗಳನ್ನು ಬಳಸಿಕೊಳ್ಳಲಾಯಿತು. ಕೋವಿಡ್ ಚಿಕಿತ್ಸೆಯಲ್ಲಿ ಆಮ್ಲಜನಕ ಬಹು ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ರೈಲುಗಳ ಸೇವೆ ಬಹಳ ಉಪಯುಕ್ತವಾಗಿದೆ.

ರಾಜ್ಯಕ್ಕೆ ಬಂದಂತಹ 25 ಆಕ್ಸಿಜನ್ ರೈಲುಗಳು ಹಾಗೂ ಇಲ್ಲಿಂದ ಹೊರಗೆ ಹೋದಂತಹ 25 ರೈಲುಗಳು ಬೆಂಗಳೂರು ರೈಲ್ವೆ ವಿಭಾಗದಲ್ಲಿ ಒಂದು ಗಂಟೆಗೆ 80 ಕಿ.ಮೀ.ಗಳ ವೇಗದಲ್ಲಿ ಪ್ರಯಾಣಿಸಿವೆ. ಜೆಟಿಜೆ ಹಾಗೂ ಡಿಎಂಎಂ ಇಂಟರ್‌ಚೇಂಜ್ ಪಾಯಿಂಟ್‌ಗಳಲ್ಲಿ ರೈಲು ಸಿಬ್ಬಂದಿಗಳ ಬದಲಾವಣೆಯನ್ನು ಕೇವಲ ೫ ನಿಮಿಷಗಳೊಳಗೆ ನಿರ್ವಹಿಸಲಾಗುತ್ತಿದೆ. ಈ ಪೈಕಿ ಕೆಲವು ರೈಲುಗಳ ಚಾಲನೆಯನ್ನು ಮಹಿಳಾ ರೈಲುಚಾಲಕರು ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಬೆಂಗಳೂರು ವಿಭಾಗದಲ್ಲಿ ಸಂಪೂರ್ಣ ಮಹಿಳಾ ತಂಡದಿಂದ ಕೂಡಿದ ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳ ಓಡಾಟದ ಕುರಿತು ಪ್ರಧಾನಿ ನರೇಂದ್ರ ಮೋದಿಯವರೂ ಸಹ ತಮ್ಮ ಆಕಾಶವಾಣಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ಮನ್ ಕೀ ಬಾತ್‌ನ ಮೇ 30ರ ಸಂಚಿಕೆಯಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕರ್ನಾಟಕದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ಒಂದು ಟ್ರಿಪ್‌ ಗೆ ಸರಾಸರಿ ಅತೀ ಹೆಚ್ಚು ಪ್ರಮಾಣದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಿರುವ ಹೆಗ್ಗಳಿಕೆಯನ್ನೂ ಹೊಂದಿದೆ.

Key words: 50th -Oxygen –Express- Departure- from- Bangalore Division

ENGLISH SUMMARY……

Half Century of Oxygen Express Trains:*

Today Bengaluru Division received 25th loaded Oxygen Express of Karnataka. The outgoing rake will be 50th Oxygen Express handled by Bengaluru division. These Oxygen express trains have immensely helped in improving the availability of Liquid Medical Oxygen in Karnataka during the most difficult phase of pandemic. All these 25 incoming rakes and 25 outgoing rakes have achieved average speed of over 80 km/h in Bangalore division’s jurisdiction. Crew change at interchange points of JTJ and DMM was achieved in under 5 minutes. Some of these trains were run by all-female crew. Running of Oxygen Express Trains by all-female crew in Bengaluru division has also featured in honourable Prime Minister‘s Mann Ki Baat programme on 30th May. It is also to be noted that the Oxygen Express Trains for Karnataka carried one of the highest average loading of Liquid Medical Oxygen per trip. Most of these trains carried six loaded Cryogenic Containers carrying almost 12