‘’ಶೇ.50ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟಕ್ಕೆ ಮುಂದಾದ ಮೈಸೂರು ವಿವಿ’’

Promotion

ಮೈಸೂರು,ಜನವರಿ.04,2021(www.justkannada.in) : ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಸಹಯೋಗದಲ್ಲಿ ಜನವರಿ 6ರಂದು  ”ಕೃತಿಗಳ ಲೋಕಾರ್ಪಣೆ” ಹಾಗೂ ಶೇ.50 ರಿಯಾಯಿತಿ ದರದಲ್ಲಿ ಎರಡು ದಿನಗಳ ‘’ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ’’ವನ್ನು ಆಯೋಜಿಸಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

50%-Discount-rate-Book sale-Mysore VV

ಸೋಮವಾರ ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಸಂಸ್ಥೆಗಳ ಪ್ರಕಟಣಾ ಕಾರ್ಯದ ಮಹತ್ವ ಮತ್ತು ಸಾಧನೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಜನವರಿ 6 ರಂದು ಬೆಳಗ್ಗೆ 11 ಗಂಟೆಗೆ ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಆವರಣದಲ್ಲಿ ಈ ಮೇಳ ಉದ್ಘಾಟನೆಯಾಗಲಿದೆ ಎಂದರು.

ಪುಸ್ತಕ ಮೇಳದ ಉದ್ಘಾಟನಾ ಕಾರ್ಯಕ್ರಮದಂದು ಡಾ.ಎಸ್.ಶಿವರಾಜಪ್ಪ ಅವರ ‘’ಕವಿಜನ ಕಾಮಧೇನು ಮುಮ್ಮಡಿ ಕೃಷ್ಣರಾಜ ಒಡೆಯರ್’’, ಡಾ.ಸಿ.ಪಾರ್ವತಿ ಅವರ ‘’ಸಿದ್ದಸಿದ್ದಾಂತ ಪದ್ಧತಿ’’, ಡಾ,ಎಂ.ಗೀತಾ ಅವರ ‘’ಅಶ್ವಲಕ್ಷಣಮ್’’, ಜಿ.ಎನ್.ಸಿದ್ದಲಿಂಗಪ್ಪ ಅವರ ‘’ಪ್ರೊ.ಎಚ್.ದೇವಿರಪ್ಪ ಬದುಕು ಮತ್ತು ಬರಹ’’, ಎಸ್.ಸಿ.ಶೋಭಾ ಅವರ ‘’ಶ್ರೀಚಾಮುಂಡಿಕಾ ಲಘುನಿಘಂಟು’’, ಡಾ.ದಿದ್ದಿಗಿ ವಂಶಿ ಕೃಷ್ಣ ಅವರ ‘’ಸೂರ್ಯಚಂದ್ರವಂಶಾನುಚರಿತಮ್’’ ಒಟ್ಟು ಐದು ಕೃತಿಗಳ ಲೋಕಾರ್ಪಣೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.50%-Discount-rate-Book sale-Mysore VV

ಪುಸ್ತಕ ಮೇಳದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಪ್ರಕಟಿಸಿರುವ ಬಹುತೇಕ ಪುಸ್ತಕಗಳು ಶೇ.50 ರಿಯಾಯಿತಿ ದರದಲ್ಲಿ ಓದುಗರಿಗೆ ದೊರೆಯಲಿವೆ ಎಂದು ತಿಳಿಸಿದರು.50%-Discount-rate-Book sale-Mysore VVಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಉಪಸ್ಥಿತರಿದ್ದರು.

50% discount book sale by UoM
Mysuru, Jan. 04, 2020 (www.justkannada.in): The Archaeological Research Institute and Broadcasting, University of Mysore has oragnised a two-day ‘Book Exhibition and Sale Mela,’ and ‘Book Release’ programme on January 6.
Addressing a press meet today at the Crawford Hall, Prof. G. Hemanth Kumar, Vice-Chancellor, University of Mysore informed that six books will be released and other books will be sold at 50% discount rates at the mela.Mysore VV,Range,four districts,Adoption,10 schools,Chancellor,Prof.G.Hemant Kumar
The mela is organised with a view of providing information to the people about the importance and achievements of the Archaeological Research Institute and Broadcasting Department of the University. The mela will be inaugurated at the Archaeological Research Institute premises, at 11.00 am on Jan. 6.
Keywords: University of Mysore/ 50% book sale/ book exhibition/ Archaeological Research Institute/ Broadcasting Department

key words : 50%-Discount-rate-Book sale-Mysore VV