ಸಹಕಾರ ಸಂಘಗಳ ಮೂಲಕ ಜೂನ್ ಒಳಗೆ 5 ಸಾವಿರ ಉದ್ಯೋಗ- ಸಚಿವ ಎಸ್.ಟಿ ಸೋಮಶೇಖರ್

ಮೈಸೂರು,ನವೆಂಬರ್, 24,2020(www.justkannada.in): ಸಹಕಾರ ಸಂಘಗಳ ಮೂಲಕ ಜೂನ್ ಒಳಗೆ 5 ಸಾವಿರ ಉದ್ಯೋಗ ಸೃಷ್ಟಿಸಲು ಸೂಚನೆ ನೀಡಿದ್ದೇನೆ ಎಂದು  ಸಹಕಾರ ಸಚಿವ ಎಸ್.ಟಿ ಸೊಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ ಸಂಕಷ್ಟ ಕಾಲದಲ್ಲಿ ಅನೇಕರಿಗೆ ಉದ್ಯೋಗ ನಷ್ಟವಾಗಿದೆ. ಹಲವರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 40 ಸಾವಿರ ಸಹಕಾರ ಸಂಘಗಳ ಮೂಲಕ 5 ಸಾವಿರ ಉದ್ಯೋಗವನ್ನು ಜೂನ್ ಒಳಗೆ ಸೃಷ್ಟಿಸಲು ಸೂಚನೆ ನೀಡಿದ್ದೇನೆ. ಯಾವ ಯಾವ ವಿಭಾಗದಿಂದ ಯಾವ ಯಾವ ಹಾಗೂ ಎಷ್ಟು ಉದ್ಯೋಗವನ್ನು ನೀಡುತ್ತಿದ್ದೇವೆ ಎಂಬ ಮಾಹಿತಿಯನ್ನು ಹಂತ ಹಂತವಾಗಿ ನೀಡುತ್ತೇನೆ ಎಂದರು.I didn't knew CM BSY will think so cheaply - KPCC President D.K. Shivakumar

ಆರ್ಥಿಕ ಸ್ಪಂದನ ಸದ್ವಿನಿಯೋಗಕ್ಕೆ 4 ವಿಭಾಗಕ್ಕೂ ನೋಡಲ್ ಅಧಿಕಾರಿಗಳ ನೇಮಕ

ಆರ್ಥಿಕ ಸ್ಪಂದನ ಕಾರ್ಯಕ್ರಮಗಳ ಮೂಲಕ ರಾಜ್ಯದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಚಾಲನೆ ಕೊಟ್ಟು 39300 ಕೋಟಿ ರೂಪಾಯಿ ಸಾಲ ನೀಡುತ್ತಿದ್ದೇವೆ. ಅಲ್ಲದೆ, ಈ ಯೋಜನೆಯ ಸದ್ವಿನಿಯೋಗವಾಗಬೇಕು, ಪಾರದರ್ಶಕವಾಗಿರಬೇಕು ಎಂಬ ನಿಟ್ಟಿನಲ್ಲಿ ನಾಲ್ಕು ವಿಭಾಗಗಳಿಗೂ ನೋಡಲ್ ಅಧಿಕಾರಿಗಳ ನೇಮಕ ಮಾಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.5-thousand-employment-through-co-operative-societies-minister-st-somashekhar

ರೈತರಿಗೆ 15300 ಕೋಟಿ ರೂ. ಸಾಲ ನೀಡುವ ಗುರಿ ಶೀಘ್ರ ಪೂರ್ಣ

ರೈತರಿಗೆ ಬೆಳೆ ಸಾಲವಾಗಿ ಪ್ರಸಕ್ತ ಸಾಲಿನಲ್ಲಿ 24.50 ಲಕ್ಷ ರೈತರಿಗೆ ಒಟ್ಟು 15300 ಕೋಟಿ ರೂ. ಸಾಲ ನೀಡುವ ಗುರಿ ಹಾಕಿಕೊಂಡಿದ್ದು, ಈಗಾಗಲೇ ಇಲ್ಲಿಯವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲವನ್ನು ನೀಡಿದ್ದೇವೆ. ಶೀಘ್ರದಲ್ಲಿ ಗುರಿ ತಲುಪಲಾಗುವುದು ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.

English summary..

Five thousand jobs through Cooperative Societies by the end of June – Minister S.T. Somashekar
Mysuru, Nov. 24, 2020 (www.justkananda.in): Minister S.T. Somashekar has informed that measures are being taken to create 5,000 jobs through 40,000 cooperative societies in the State by the month of June 2021, in phases.
Speaking to the press in Mysuru today, he informed that many people have lost jobs due to the Covid pandemic and many of them are not getting jobs. “Keeping this in mind I have instructed to create jobs through cooperative societies. I will inform you through which division and how many jobs will be created in phases,” he added.
On the occasion, he explained that a sum of Rs.39,300 crore loans will be distributed under the ‘Aarthika Spandana’ programmes, in Bengaluru, Mysuru, Kalaburagi, and Belagavi divisions. We have already appointed nodal officers to all these four divisions to ensure proper use of the programme and keep it transparent,” he added.5-thousand-employment-through-co-operative-societies-minister-st-somashekhar
Further, he said that the department had an aim of providing Rs. 15,300 crore loans to 24.50 lakh farmers in the State as farming loans and a sum of Rs. 9,945.82 crore loans have been already disbursed to 15,22,076 farmers.
Keywords: 5,000 jobs by June 2021/ S.T. Somashekar/cooperative societies/loans

Key words: 5 Thousand -Employment -through -Co-operative -Societies – Minister -ST Somashekhar.