ಭಾರಿ ಮಳೆಯಿಂದ 5.80 ಲಕ್ಷ ಹೆಕ್ಟೇರ್ ಬೆಳೆ ನಾಶ: ಕೇಂದ್ರಕ್ಕೆ ಅನುದಾನ ಕೋರಿ ಮನವಿ- ಸಚಿವ ಆರ್.ಅಶೋಕ್.

ಬೆಂಗಳೂರು,ಆಗಸ್ಟ್,30,2022(www.justkannada.in): ರಾಜ್ಯದಲ್ಲಿ ಮತ್ತೆ ,ಮಳೆ ಅವಾಂತರವಾಗಿದ್ದು, ಕಳೆದ 24 ಗಂಟೆಯಲ್ಲಿ 830 ಮಿ.ಮೀ ಮಳೆಯಾಗಿದೆ. ಮಳೆಹಾನಿ ಸಂಬಂಧ ಕೇಂದ್ರಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

ಮಳೆ ಹಾನಿ ಕುರಿತು ಮಾತನಾಡಿ ಮಾಹಿತಿ ನೀಡಿದ ಸಚಿವ ಆರ್.ಅಶೋಕ್, ರಾಜ್ಯದಲ್ಲಿ  27 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.  ರಾಮನಗರ, ಚಾಮರಾಜನಗರ ಮಂಡ್ಯದಲ್ಲಿ 9 ಮಿ.ಮೀ ಮಳೆಯಾಗಿದೆ.  ಕಳೆದ 24 ಗಂಟೆಯಲ್ಲಿ ಮಳೆಯಿಂದಾಗಿ ರಾಮನಗರದಲ್ಲಿ ಇಬ್ಬರು,  ಬಳ್ಳಾರಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.  9556 ಜನರನ್ನ ಸ್ಥಳಾಂತರ ಮಾಡಲಾಗಿದೆ. ಮಳೆಯಿಂದಾಗಿ  5.80 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ.  ರಾಜ್ಯದಲ್ಲಿ 499 ಕೆರೆಕೋಡಿ ಒಡೆದು ಹೋಗಿದೆ ಎಂದು ತಿಳಿಸಿದರು.

ಮಳೆಹಾನಿ ಕುರಿತ ವರದಿ ಪರಿಶೀಲಿಸಿ ಕೇಂದ್ರಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಲಾಗುತ್ತದೆ. ಎನ್ ಡಿಆರ್ ಎಫ್ ಅಢಿ 1022.05 ಕೋಟಿ  ಹಣ ಬರಬೇಕಿದೆ.  ಈಗಾಗಲೇ ಮಳೆಹಾನಿ ಪ್ರದೇಶಕ್ಕೆ ಸಿಎಂ ಭೇಟಿ ನೀಡಿದ್ದಾರೆ. ಮಳೆಯಿಂದ ಮನೆ ಹಾನಿಯಾದರೇ ತಕ್ಷಣ ಪರಿಹಾರ ನೀಡಲಾಗುತ್ತದೆ.  ಬೆಳೆ ಹಾನಿ ಸಂಬಂಧ ಪರಿಹಾರ ಬಿಡುಗಡೆಯಾಗುತ್ತೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words: 5.80 lakh -hectares -crops -destroyed – heavy rain-Minister- R. Ashok.