“4ನೇ ದಿನವೂ ಮುಂದುವರೆದ ಸಾರಿಗೆ ನೌಕರರ ಮುಷ್ಕರ : ಸರ್ಕಾರದಿಂದ ಮುಷ್ಕರ ನಿಷೇಧಿಸಿ ಆದೇಶ”

ಬೆಂಗಳೂರು,ಏಪ್ರಿಲ್,10,2021(www.justkannada.in) : ಸಾರಿಗೆ ನೌಕರರ ಮುಷ್ಕರವು ನಾಲ್ಕನೇ ದಿನವೂ ಮುಂದುವರಿದಿದೆ. ಸರ್ಕಾರವು ನೌಕರರ ಮೇಲೆ ಕಾನೂನು ಅಸ್ತ್ರ ಪ್ರಯೋಗಿಸಿದ್ದು, ಕೈಗಾರಿಕಾ ವಿವಾದ ಕಾಯ್ದೆ 1947ರ ಕಲಂ10(3)ರ ಅಡಿ  ಮಷ್ಕರ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.Transport,Employees,Strike,employees,New,weapon,government  ಸಾರಿಗೆ ಸೇವೆಯನ್ನ ಉಪಯುಕ್ತ ಸೇವೆ ಎಂದು ಘೋಷಣೆ ಮಾಡಿದ್ದು, ಕೈಗಾರಿಕಾ ಕಾಯ್ದೆ ಅನ್ವಯ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಮುಷ್ಕರ ನಡೆಸುವಂತಿಲ್ಲ ಎಂದು ಕಾನೂನು ಅಸ್ತ್ರ ಬಳಸಿ ನೌಕರರ ಪ್ರತಿಭಟನೆ ಸರ್ಕಾರ ನಿಷೇಧಿಸಿದೆ.

ಚಾಲಕ ಕಮ್ ನಿರ್ವಾಹಕ ಹುದ್ದೆ ಅರ್ಜಿ ಹಾಕಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲು ನಿರ್ಧಾರ ಮಾಡಿದ್ದು, ತಾತ್ಕಾಲಿಕ ಚಾಲಕ ನಿರ್ವಾಹಕ ನಿಯೋಜನೆಗೆ ಸಾರಿಗೆ ಇಲಾಖೆ ಮುಂದಾಗಿದೆ. ಪ್ರತಿನಿತ್ಯ ಚಾಲಕರಿಗೆ 600ರೂ ನಿರ್ವಾಹಕರಿಗೆ 500ರೂ ನಿಗದಿಪಡಿಸಿದೆ.  4th day-Continued-transport-employees-Strike-government-strike-Prohibit-Orders

6ನೇ ವೇತನ ಆಯೋಗ ಜಾರಿಯಾಗುವ ವರೆಗೂ ಕರ್ತವ್ಯಕ್ಕೆ ಹಾಜರಾಗಲ್ಲ. ಮುಷ್ಕರ ವಾಪಾಸ್ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ನೌಕರರು ಸರ್ಕಾರಕ್ಕೆ ತಿರುಗೇಟ ನೀಡಿದ್ದು, ಸರ್ಕಾರ ಹಾಗೂ ಸಾರಿಗೆ ನೌಕರರ ಹಗ್ಗಜಗ್ಗಾಟ ಮುಂದುವರಿದಿದೆ.

key words : 4th day-Continued-transport-employees-Strike-government-strike-Prohibit-Orders