ಚಿತ್ರದುರ್ಗದ ಮುರುಘಾ ಮಠದಲ್ಲಿ ಗೋಡೆಗೆ ಹಾಕಿದ್ಧ 47 ಫೋಟೋಗಳು ಕಳ್ಳತನ.

ಚಿತ್ರದುರ್ಗ,ಅಕ್ಟೋಬರ್,8,2022(www.justkannada.in):  ಚಿತ್ರದುರ್ಗದ ಮುರುಘಾ ಮಠದಲ್ಲಿ ಗೋಡೆಗೆ ಹಾಕಲಾಗಿದ್ಧ 47 ಫೋಟೋಗಳು ಕಳ್ಳತನವಾಗಿರುವ ಘಟನೆ ನಡೆದಿದೆ.

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ, ಫೋಕ್ಸೋ ಕಾಯ್ದೆಯಡಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳು ಬಂಧಿತರಾಗಿದ್ದಾರೆ. ಈ ನಡುವೆ ಮುರುಘಾ ಶ್ರೀಗಳು ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಜೊತೆ ತೆಗೆಸಿಕೊಂಡಿರುವ 47 ಫೋಟೋಗಳನ್ನ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.

ಅಕ್ಟೋಬರ್ 5 ರಂದು ಕಳ್ಳತನವಾಗಿದ್ದು ಕಳ್ಳತನದ ದೃಶ್ಯ ಸಿ.ಸಿ ಟಿವಿಯಲ್ಲಿ ದಾಖಲಾಗಿದೆ. ಈ ಕುರಿತು ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 47 photos –stolen- Chitradurga- Muruga Math