ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,810 ಹೊಸ ಕೊರೋನಾ ಪ್ರಕರಣ ಪತ್ತೆ…

kannada t-shirts

ನವದೆಹಲಿ,ನವೆಂಬರ್,30,2020(www.justkannada.in): ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,810 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 94,31,692ಕ್ಕೆ ಏರಿಕೆಯಾಗಿದೆ.logo-justkannada-mysore

ಕೇಂದ್ರ ಆರೋಗ್ಯ ಸಚಿವಾಲಯ   ಮಾಹಿತಿ ನೀಡಿದ್ದು,  ಒಂದೇ ದಿನದಲ್ಲಿ ಕೊರೋನಾ ಸೋಂಕಿಗೆ 443 ಜನರು ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು ಮೃತಪಟ್ಟವರ ಸಂಖ್ಯೆ 1,37,139. 24 ಗಂಟೆಯಲ್ಲಿ 45,333 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 88,47,600 ಜನರು ಗುಣಮುಖರಾಗಿದ್ದಾರೆ.41810-corona-cases-detected-last-24-hours-country

ದೇಶದಲ್ಲಿ 4,46,952 ಸಕ್ರಿಯ ಕೊರೋನಾ ಪ್ರಕರಣಗಳಿವೆ.  ಒಂದೇ ದಿನ 8,76,173 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೂ 14,03,79,976 ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

Key words: 41,810 Corona cases -detected -last 24 hours-country

 

website developers in mysore