ದೇಶದಲ್ಲಿ ಒಂದೇ ದಿನ 36,571 ಮಂದಿಯಲ್ಲಿ ಕೋರೋನಾ ಸೋಂಕು ಪತ್ತೆ.  

Promotion

ನವದೆಹಲಿ,ಆಗಸ್ಟ್,20,2021(www.justkannada.in):  ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು  ಒಂದೇ ದಿನದಲ್ಲಿ ಹೊಸದಾಗಿ 36,571 ಜನರಲ್ಲಿ  ಕೊರೋನಾ ಸೋಂಕು ಪತ್ತೆಯಾಗಿದೆ.

ಕಳೆದ 24 ಗಂಟೆಯಲ್ಲಿ 540 ಜನ ಮಹಾಮಾರಿಗೆ ಬಲಿಯಾಗಿದ್ದು, ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಮೃತಪಟ್ಟವರ ಸಂಖ್ಯೆ 4,33,589ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 363605 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 36555 ಜನರು ಗುಣಮುಖರಾಗಿದ್ದಾರೆ.

ಈವರೆಗೆ 3,15,61,635 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ರಿಕವರಿ ರೇಟ್ 97.54%ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 57,22,81,488 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

Key words: 36,571 cases -coronavirus -infection – detected -single day.