ಕರಾಚಿ-ರಾವಲ್ಪಿಂಡಿ ತೇಜಗಾಂ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ: 30 ಜನ ಸಾವು

ನವದೆಹಲಿ, ಅಕ್ಟೋಬರ್ 31, 2019 (www.justkannada.in): ಕರಾಚಿ-ರಾವಲ್ಪಿಂಡಿ ತೇಜಗಾಂ ಎಕ್ಸ್ ಪ್ರೆಸ್ ರೈಲಿನಲ್ಲಿ ಸ್ಫೋಟ ಸಂಭವಿಸಿದೆ.

ಪಂಜಾಬ್ ಪ್ರಾಂತ್ಯದ ದಕ್ಷಿಣದಲ್ಲಿರುವ ರಹೀಂ ಯಾರ್ ಖಾನ್ ಬಳಿ ಸಂಭವಿಸಿದೆ. ಘಟನೆಯಲ್ಲಿ ಮೂರು ಬೋಗಿಗಳು ಬೆಂಕಿಗಾಹುತಿಯಾಗಿವೆ. ಈ ಅಪಘಾತದಲ್ಲಿ 46 ಜನರು ಸಾವನ್ನಪ್ಪಿದ್ದರೆ, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೇಕರು ಬೋಗಿಗೆ ಬೆಂಕಿ ಹತ್ತಿಕೊಳ್ತಿದ್ದಂತೆ ರೈಲಿನಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದೆ.