3.16 ಕೋಟಿ ರೂ.ಮೌಲ್ಯದ ಖೋಟಾ ನೋಟು ವಶ : ಆರೋಪಿ  ಅಂದರ್….

ಚಾಮರಾಜನಗರ,ಆ,17,2019(www.justkannada.in):  ಎರಡು ಸಾವಿರ ರೂ. ಮುಖಬೆಲೆಯ ಸುಮಾರು ಮೂರು ಕೋಟಿಗೂ ಹೆಚ್ಚು ಮೌಲ್ಯದ ಖೋಟಾ ನೋಟನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಚಾಮರಾಜನಗರ ಪೊಲೀಸರು ಬಂಧಿಸಿ, ಖೋಟ್ ನೋಟು ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಚ್.ಡಿ.ಆನಂದ್ ಕುಮಾರ್ , ಈಗಾಗಲೇ 15 ದಿನಗಳ ಹಿಂದೆ ಖೋಟಾ ನೋಟ್ ಸಾಗಾಣೆಯ ಬಗ್ಗೆ ಮಾಹಿತಿ ಇತ್ತು. ಈ ಮಾಹಿತಿಯನ್ನು ಆಧರಿಸಿ ಪ್ರತಿ ಯೊಂದು ವಾಹನವನ್ನು ತಪಾಸಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಯಿತು. ಅದರಂತೆ ಚಾಮರಾಜನಗರ ತಾಲೂಕು ಚಾಮರಾಜನಗರ – ಸತ್ಯಮಂಗಲ ರಸ್ತೆಯಲ್ಲಿರುವ ಅಟ್ಟಗೂಳಿಪುರ ಬಳಿ ಚಾಮರಾಜನಗರ ಪೊರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪುಟ್ಟಸ್ವಾಮಿ ನೇತೃತ್ವದ ಪೊಲೀಸ್ ತಂಡ ಬೊಲೆರೋ ಪಿಕಪ್ ಕ್ಯಾಂಟರ್ ಒಂದನ್ನು ಪರಿಸಿಲಿಸಿದಾಗ ಆ ವಾಹನದಲ್ಲಿ ಎರಡು ಸಾವಿರ ಮುಖಬೆಲೆಯ 3.16 ಕೋಟಿ ಮೌಲ್ಯದ ಖೋಟಾ ನೋಟುಗಳು ಪತ್ತೆಯಾದವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಎಚ್.ಡಿ.ಆನಂದ್ ಕುಮಾರ್ ಸುದ್ದಿಗೋಷ್ಟಿಯಲ್ಲಿ  ತಿಳಿಸಿದರು.

ಖೋಟಾ ನೋಟ್ ಸಾಗಣೆ ಮಾಡುತ್ತಿದ್ದ ವಾಹನದ ಚಾಲಕನನ್ನು  ಬಂಧಿಸಿ, ಆತನಿಂದ ಎಲ್ಲ ಖೋಟಾ ನೋಟುಗಳನ್ನು ವಶಪಡೆದುಕೊಂಡು ಆತನನ್ನು  ವಿಚಾರ ಮಾಡಿದ ವೇಳೆ ನಾನು ಸರಗೂರು ಪಟ್ಟಣದವನು. ನನ್ನ ಹೆಸರು ಕಾರ್ತಿಕ್. ನನ್ನನ್ನು ವಾಹನ ಚಾಲನೆಗಾಗಿ ಮಾತ್ರ ಕರೆದುಕೊಂಡು ಬಂದರು, ಅವರು ಯಾರು ಎಂದು ಗೊತ್ತಿಲ್ಲ, ಜೊತೆಗೆ ಇದರಲ್ಲಿ ಖೋಟಾ ನೋಟ್ ಇದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈ ಖೋಟಾ ನೋಟ್ ಸಾಗಣೆ ಬಗ್ಗೆ ಹೆಚ್ಚಿನ‌ ಮಾಹಿತಿ ಸಂಗ್ರಹಮಾಡುತ್ತಿದ್ದೇವೆ ಎಂದು ಚಾಮರಾಜನಗರ ಎಸ್ಪಿ ಹೆಚ್.ಡಿ ಆನಂದ್ ಕುಮಾರ್ ತಿಳಿಸಿದರು.

Key words: 3.16 crore -worth – fake notes-accused –arrest- chamarajanagar