2ನೇ ಟೆಸ್ಟ್: ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ಇನ್ನಿಂಗ್ಸ್ ಮುನ್ನಡೆ

ಕ್ರೈಸ್ಟ್ ​ ಚರ್ಚ್ , ಮಾರ್ಚ್ 01, 2020 (www.justkannada.in): ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ​ ಪಂದ್ಯದಲ್ಲಿ ಟೀಂ ಇಂಡಿಯಾ ಕೊಂಚ ಮುನ್ನಡೆ ಸಾಧಿಸಿದೆ.

ಹ್ಯಾಗ್ಲೀ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್’​ ಮನ್’​ ಗಳು ವೈಫಲ್ಯ ಅನುಭವಿಸಿದರೂ ಬೌಲರ್ ​ ಗಳು ಅಮೋಘ ಪ್ರದರ್ಶನ ನೀಡಿದರು.

ಪರಿಣಾಮ ನ್ಯೂಜಿಲೆಂಡ್ 235 ರನ್​ಗೆ ಆಲೌಟ್ ಆಗಿದ್ದು, 7 ರನ್​ಗಳ ಹಿನ್ನಡೆ ಅನುಭವಿಸಿದೆ. ನಿನ್ನೆ ಟೀಂ ಇಂಡಿಯಾವನ್ನು 242 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತ್ತು.

ಎರಡನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್​ಗಳ ದಾಳಿಗೆ ನಲುಗಿ ಹೋಯಿತು. ಇಂದು 3 ರನ್ ಗಳಿಸುವಷ್ಟರಲ್ಲಿ ಕಿವೀಸ್ 30 ರನ್ ಗಳಿಸಿದ್ದ ಟಾಮ್ ಬ್ಲಂಡೆಲ್ ವಿಕೆಟ್ ಕಳೆದುಕೊಂಡಿತು.

ಅಂತಿಮವಾಗಿ ನ್ಯೂಜಿಲೆಂಡ್ 73.1 ಓವರ್​ನಲ್ಲಿ 235 ರನ್​ಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ 3, ರವೀಂದ್ರ ಜಡೇಜಾ 2 ಮತ್ತು ಉಮೇಶ್ ಯಾದವ್ 1 ವಿಕೆಟ್ ಪಡೆದರು.