ಶಿವಣ್ಣ-ಉಪ್ಪಿ ಕಾಂಬಿನೇಷನ್ ‘ಓಂ’ ರಿಲೀಸ್ ಆಗಿ ಇಂದಿಗೆ 26 ವರ್ಷ!

ಬೆಂಗಳೂರು, ಮೇ 19, 2021 (www.justkannada.in): ಇದೇ ದಿನ 26 ವರ್ಷಗಳ ಹಿಂದೆ ಅಂದರೆ ಮೇ 19ಕ್ಕೆ ಓಂ ಸಿನಿಮಾ ರಿಲೀಸ್ ಆಗಿತ್ತು.

ಹೌದು. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಅಭಿನಯದ ‘ಓಂ’ ಸಿನಿಮಾಗೆ 26 ವರ್ಷದ ಸಂಭ್ರಮ ಇಂದು.

ಈ ಸಂಭ್ರಮವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಓಂ ಚಿತ್ರದ ಪೋಸ್ಟರ್ ಗಳನ್ನು ಶೇರ್ ಮಾಡಿ ಆಚರಿಸುತ್ತಿದ್ದಾರೆ,

1995ರಲ್ಲಿ ರಿಲೀಸ್ ಆದ ಓಂ ಸೂಪರ್ ಹಿಟ್ ಆಗಿದ್ದಲ್ಲದೆ. ಸಾಕಷ್ಟು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಶಿವರಾಜ್ ಕುಮಾರ್ ‘ಸತ್ಯ’ ಪಾತ್ರ ಮತ್ತು ‘ಮಧು’ ಪಾತ್ರದಲ್ಲಿ ಪ್ರೇಮಾ ಮಿಂಚಿದ್ದರು.