ಸಾರ್ವಜನಿಕವಾಗಿ ಮಾಸ್ಕ್ ಧರಿಸದಿದ್ದರೆ 200 ರೂ. ದಂಡ

kannada t-shirts

ಮೈಸೂರು,ಸೆಪ್ಟೆಂಬರ್,24,2020(www.justkannada.in) : ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವ ಸಾರ್ವಜನಿಕರಿಗೆ ತಲಾ 200 ರೂ. ದಂಡ ವಿಧಿಸುವಂತೆ  ಪಿ.ಎಸ್.ಐ ಮತ್ತು ಮೇಲ್ಪಟ್ಟ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.jk-logo-justkannada-logoಕೊರೊನಾ ತಡೆಗಟ್ಟುವ ಉದ್ದೇಶದಿಂದ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ, ನಗರದ ಎಲ್ಲಾ ವಿಭಾಗದ ಎಸಿಪಿ ಹಾಗೂ ಎಲ್ಲಾ ಠಾಣೆಗಳ ಪೊಲೀಸ್ ಇನ್ ಸ್ಪೆಕ್ಟರ್ ಮತ್ತು ಸಬ್ ಇನ್ ಸ್ಪೆಕ್ಟರ್ ಗಳು ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದಿರುವ ಸಾರ್ವಜನಿಕರಿಗೆ ದಂಡವನ್ನು ವಿಧಿಸುವಂತೆ ಸೂಚಿಸಿದ್ದಾರೆ.200-not-wearing-mask-public-Fine

ಪ್ರತಿದಿನ ಸಂಜೆ ಆ ದಿನ ನಗರದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಮಾಹಿತಿ

ಇದಕ್ಕೆ ಸಂಬಂದಿಸಿದಂತೆ ಪ್ರತಿದಿನ ಸಂಜೆ 6 ಕ್ಕೆ ಸಂಬಂಧಪಟ್ಟ ವಿಭಾಗದ ಎಸಿಪಿ ಅವರು ಪೊಲೀಸ್ ಠಾಣಾವಾರು ಮಾಹಿತಿಯನ್ನು ಪಡೆದು, ಕ್ರೂಢೀಕರಿಸಿ ನಿಸ್ತಂತು ಕೊಠಡಿಗೆ ನೀಡುವುದು. ಪಿಐ, ನಿಸ್ತಂತು ಘಟಕದವರು ಪ್ರತಿದಿನ ಸಂಜೆ ಆ ದಿನ ನಗರದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಮಾಹಿತಿಯನ್ನು ಡಿಸಿಪಿ ಅವರುಗಳಿಗೆ ಹಾಗೂ ನನಗೆ ನೀಡಬೇಕು ಎಂದು ಹೇಳಿದ್ದಾರೆ.

ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮ

ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಮೈಸೂರು ನಗರದಲ್ಲಿ ಮಾಸ್ಕ್ ಧರಿಸದಿರುವ ಸಾರ್ವಜನಿಕರಿಗೆ ದಂಡವನ್ನು ಅಧೀನ ಅಧಿಕಾರಿಗಳು ವಿಧಿಸುತ್ತಿರುವ ಬಗ್ಗೆ ಖುದ್ದು ಗಮನಹರಿಸಿ, ಪರಿಣಾಮಕಾರಿ ಜಾರಿಗೆ ಅಗತ್ಯ ಕ್ರಮವಹಿಸುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

key words : 200-not-wearing-mask-public-Fine

website developers in mysore