200 ಕೋಟಿ ರೂ. ಕ್ಲಬ್ ಸೇರಿದ ‘ಗುಡ್ ನ್ಯೂಸ್’ !

ಬೆಂಗಳೂರು, ಜನವರಿ 21, 2019 (www.justkannada.in): ಕರೀನಾ ಕಪೂರ್​, ಅಕ್ಷಯ್​ ಕುಮಾರ್​, ದಿಲ್​ಜಿತ್​ ದೋಸಾಂಜ್​, ಹಾಗೂ ಕಿಯಾರಾ ನಟಿಸಿರುವ ‘ಗುಡ್​ ನ್ಯೂಸ್​’ ಚಿತ್ರ 200 ಕೋಟಿ ಕ್ಲಬ್​ ಸೇರಿದೆ.

ಈ ಸಿನಿಮಾ ಬಿಡುಗಡೆಯಾದ 6 ದಿನಕ್ಕೆ ನೂರು ಕೋಟಿ ಗಳಿಸಿತ್ತು. ಹಾಲಿವುಡ್​ ಹಾಗೂ ಬಾಲಿವುಡ್​ನ ಹಲವಾರು ಸಿನಿಮಾಗಳಿಗೆ ಟಕ್ಕರ್​ ಕೊಟ್ಟು ಇನ್ನು ಸಹ ಯಶಸ್ವಿ ಪ್ರದರ್ಶನ ಕಾಣುತ್ತಿದೆ ‘ಗುಡ್​ನ್ಯೂಸ್​’.

ಕಾಮಿಡಿ ಹಾಗೂ ಎಮೋಷನ್​ ಡ್ರಾಮಾ ಆಗಿರುವ ‘ಗುಡ್​ ನ್ಯೂಸ್​’ನಲ್ಲಿ ಮಕ್ಕಳನ್ನು ಪಡೆಯುವ ಸಲುವಾಗ ಐವಿಎಫ್​ ಸೆಂಟರ್​ಗೆ ಹೋದಾಗ ಆಗುವ ಎಡವಟ್ಟುಗಳ ಕುರಿತ ಸಿನಿಮಾ ಗುಡ್ ನ್ಯೂಸ್ !