ಭಾರಿ ಮಳೆಗೆ ಮನೆ ಕುಸಿದು 2 ವರ್ಷದ ಮಗು ಸಾವು…

ಕೊಪ್ಪಳ,ಅ,28,2019(www.justkannada.in):  ಭಾರಿ ಮಳೆಯಿಂದಾಗಿ ಮನೆ ಕುಸಿದು ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ  ಕಾರಟಗಿಯಲ್ಲಿ ಈ ಘಟನೆ ನಡೆದಿದೆ. ದುರುಗಪ್ಪ, ಲಕ್ಷ್ಮಿ ದಂಪತಿಯ ಎರಡು ವರ್ಷದ ಮಗು ಮೌನೀಶ್ ಮೃತಪಟ್ಟ ಮಗು. ಘಟನೆಯಲ್ಲಿ ದುರುಗಪ್ಪ ಮತ್ತು ಲಕ್ಷ್ಮಿ ದಂಪತಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ.

ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 2-year-old baby -dies – heavy rain- collapses- home-koppala