2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು: ಸರಣಿ ವಶ.

kannada t-shirts

ಮುಂಬೈ,ಡಿಸೆಂಬರ್,6,2021(www.justkannada.in):  ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 372 ರನ್ ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಟೆಸ್ಟ್ ಸರಣಿ ವಶಕ್ಕೆ ಪಡೆದಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 540 ರನ್ ಗುರಿ ಪಡೆದಿದ್ದ ನ್ಯೂಜಿಲ್ಯಾಂಡ್ ಮೂರನೇ ದಿನದಾಟದ ಅಂತ್ಯದಲ್ಲಿ ಐದು ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು.  ಇಂದು ನಾಲ್ಕನೇ ದಿನದಲ್ಲಿ ನ್ಯೂಜಿಲ್ಯಾಂಡ್ 167 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಟೀಂ ಇಂಡಿಯಾ ವಿರುದ್ಧ ಮಂಡಿಯೂರಿತು. ಇನ್ನು ಮಾರಕ ಸ್ಪಿನ್ ದಾಳಿ ನಡೆಸಿದ ಆರ್.ಅಶ್ವಿನ್ ಮತ್ತು ಜಯಂತ್ ಯಾದವ್ ತಲಾ 4 ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 62 ರನ್​ಗೆ ಸರ್ವಪತನ ಕಂಡು ನ್ಯೂಜಿಲ್ಯಾಂಡ್ ಕೆಟ್ಟ ದಾಖಲೆ ಬರೆದಿತ್ತು. ಈ ಗೆಲುವಿನೊಂದಿಗೆ ಭಾರತ 1-0 ಅಂತರದಿಂದ ಮುನ್ನಡೆ ಪಡೆದುಕೊಂಡು ಟೆಸ್ಟ್ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಿದೆ.

ಭಾರತ ಮೊದಲ ಇನ್ನಿಂಗ್ಸ್ 325 ಮತ್ತು ಎರಡನೇ ಇನ್ನಿಂಗ್ಸ್ 276-7ಕ್ಕೆ ಡಿಕ್ಲೇರ್

ನ್ಯೂಜಿಲ್ಯಾಂಡ್: ಮೊದಲ ಇನ್ನಿಂಗ್ಸ್  62 ಮತ್ತು ಎರಡನೇ ಇನ್ನಿಂಗ್ಸ್ 167

key words: Greatest -victory – Team India – 2nd Test-newzland

ENGLISH SUMMARY…

Team India registers huge win in 2nd test: Wins series
Mumbai, December 6, 2021 (www.justkannada.in): Team India led by captain Virat Kohli has won the 2nd test against the touring team by 372 runs. With this, the team India has won the series.
Playing against a target of 540 runs, the New Zealand team could score only 140 runs losing five wickets at the end of the third day of the tournament. Today, on the fourth day, the visiting team lost all the wickets for 167 runs at the Wankhede stadium. Spinner R. Ashwin and Jayanth Yadav grabbed four wickets each.
In the first innings, the visiting team had lost all the wickets by scoring just 62 runs. With this win, India is leading with 1-0 in and has won the series.
India first innings: 325 and second innings: 276-7 declared
New Zealand: first innings – 62 and second innings 167
Keywords: Team India/ 2nd test/ victory

website developers in mysore