17 ಶಾಸಕರನ್ನ ಅನರ್ಹ ಮಾಡಿರುವ ಸ್ಪೀಕರ್ ಕ್ರಮ ನಿಯಮ ಬದ್ಧ- ಜೆಡಿಎಸ್ ಪರ ವಕೀಲ ರಾಜೀವ್ ಧವನ್ ವಾದ ಮಂಡನೆ…

ನವದೆಹಲಿ,ಅ,24,2019(www.justkannada.in): ಗುಂಪಿನಲ್ಲಿ ಬಂದು   17 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಏನೋ ಉದ್ದೇಶವಿದೆ ಎಂದು ಸ್ಪೀಕರ್ ಗೆ ತಿಳಿದಿದ್ದು ಹೀಗಾಗಿ 17 ಮಂದಿ ಶಾಸಕರನ್ನ ಅನರ್ಹಗೊಳಿಸಿದ್ದಾರೆ. ಸ್ಪೀಕರ್ ನ ಕ್ರಮ ನಿಯಮ ಬದ್ಧವಾಗಿದೆ ಎಂದು ಜೆಡಿಎಸ್ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದರು.

ಸುಪ್ರೀಂಕೋರ್ಟ್ ನ ನ್ಯಾ.ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ  ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿದ್ದು ಜೆಡಿಎಸ್ ಪರ ವಾದ ಮಂಡಿಸಿದ ವಕೀಲ ರಾಜೀವ ಧವನ್, ಸದನಕ್ಕೆ ಹಾಜರಾಗುವಂತೆ ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡೆರಿಗೆ ವಿಪ್ ನೀಡಲಾಗಿತ್ತು. ಆದರೆ ಅವರು ಹಾಜರಾಗಲಿಲ್ಲ. ಹೀಗಾಗಿ ಅನರ್ಹತೆಗೆ ದೂರು ನೀಡಿದ್ದವು.  17 ಶಾಸಕರ ಅನರ್ಹಗೊಳಿಸಿ ಸ್ಪೀಕರ್ ಕೈಗೊಂಡಿರುವ ಕ್ರಮ ನಿಯಮಬದ್ಧವಾಗಿದೆ. ರಾಜೀನಾಮೆ ನೀಡುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ. ಆದರೆ ಶಾಸಕರು ಸರ್ಕಾರಿ ಅಧಿಕಾರಿಗಳಲ್ಲ. ಅವರು ಜನಪ್ರತಿನಿಧಿಗಳು. ಹಾಗಾಗಿ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿ ವಿಸ್ತತ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.

ಇನ್ನು ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಪರ ವಾದ ಮಂಡಿಸಿದ ವಕೀಲ, ವಿ.ಗಿರಿ,  ಶ್ರೀಮಂತ ಪಾಟೀಲ್ ಅವರು ನೇರವಾಗಿ ಮುಂಬೈಗೆ ಹೋಗಿಲ್ಲ. ಚೆನ್ನೈಗೆ ತೆರಳಿ ನಂತರ ಮುಂಬೈಗೆ ಹೋಗಿದ್ದರು.  ಅನಾರೋಗ್ಯ ಹಿನ್ನೆಲೆ ಸ್ಪೀಕರ್ ಗೆ ಪತ್ರ ಬರೆದು ಹೋಗಿದ್ದರು. ರಾಜೀನಾಮೆ ನೀಡಿರಲಿಲ್ಲ.  ಆದರೆ  ವಿಪ್ ಉಲ್ಲಂಘನೆ ಆರೋಪ ಹೊರಿಸಿ ಅನರ್ಹಗೊಳಿಸಿದ್ದಾರೆ. ರಾಜೀನಾಮೆ ನೀಡಿದ್ದಿದ್ದರೂ ಅನರ್ಹಗೊಳಿಸಲಾಗಿದೆ ಎಂದು ವಾದ ಮಂಡಿಸಿದರು.

ಸ್ಪೀಕರ್ ಪರ ವಾದ ಮಂಡಿಸಿದ  ತುಷಾರ್ ಮೆಹ್ತಾ ಅವರು, ಈ ಪ್ರಕರಣದ ಬಗ್ಗೆ ಹೊಸದಾಗಿ ತೀರ್ಮಾನ ಕೈಗೊಳ್ಳಲು ಅವಕಾಶವಿದೆ.  ಪ್ರಕರಣದ ಬಗ್ಗೆ ಅಗತ್ಯವಿದ್ದರೇ ಹೊಸ ತೀರ್ಮಾನ ಕೈಗೊಳ್ಳಬಹುದು. ಶಾಸಕರು ನೀಡಿದ ರಾಜೀನಾಮೆಯನ್ನು ತಿರಸ್ಕರಿಸಲು ಸ್ಪೀಕರ್ ಅವರಿಗೆ ಯಾವುದೇ ಕಾರಣಗಳಿರಲಿಲ್ಲ.  ಹೀಗಾಗಿ ತೀರ್ಮಾನದ ಬಗ್ಗೆ ಮರುಪರಿಶೀಲನೆಗೆ ಕಳುಹಿಸಿ ಎಂದು ಕೋರ್ಟ್ ಗೆ ಮನವಿ ಮಾಡಿದರು.

Key words: 17MLA-disqualified -speaker – JDS -advocate – Rajeev Dhawan-supreme court