ರಾಜ್ಯ ಬಿಜೆಪಿ ಸರ್ಕಾರದ ನೂತನ ಸಚಿವರಾಗಿ 17 ಮಂದಿ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ…

ಬೆಂಗಳೂರು,ಆ,20,2019(www.justkannada.in):  ಬಿಎಸ್ ಯಡಿಯೂರಪ್ಪ ಸಿಎಂ ಆದ 20 ದಿನಗಳ ಬಳಿಕ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಯಾಗಿದ್ದು ಇಂದು 17 ಮಂದಿ ಶಾಸಕರು ನೂತನ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜನೆ ಮಾಡಲಾಗಿತ್ತು. ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ,ಎಸ್ ಈಶ್ವರಪ್ಪ,  ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವಥ್ ನಾರಾಯಣ್ , ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್  ಮತ್ತು ಲಕ್ಷ್ಮಣ್ ಸವದಿ, ಶಾಸಕ ಗೋವಿಂದ ಕಾರಜೋಳ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್  ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲು, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ ಮಾದುಸ್ವಾಮಿ ಸೇರಿ 17 ಮಂದಿ ಶಾಸಕರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆ ರಾಜ್ಯ ಸಚಿವ ಸಂಪುಟ ರಚನೆ ವಿಳಂಬವಾಗಿತ್ತು. ಕಳೆದ ಎರಡು ದಿನದ ಹಿಂದೆ ಸಿಎಂ ಬಿಎಸ್ ಯಡಿಯೂರಪ್ಪ ನವದೆಹಲಿಗೆ ತೆರಳಿ ಸಚಿವ ಸಂಪುಟ ರಚನೆ ಬಗ್ಗೆ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿದ್ದರು. ನಂತರ ನಿನ್ನೆ  ಬಿಜೆಪಿ ಹೈಕಮಾಂಡ್ ನೂತನ ಸಚಿವರ ಪಟ್ಟಿಯನ್ನ ಸಿಎಂ ಬಿಎಸ್ ಯಡಿಯೂರಪ್ಪಗೆ ರವಾನಿಸಿತ್ತು.

ನೂತನ ಸಚಿವರ ಪಟ್ಟಿ ಇಲ್ಲಿದೆ ನೋಡಿ…..

1) ಗೋವಿಂದ ಎಂ.ಕಾರಜೋಳ

2) ಡಾ.ಸಿ.ಎನ್.ಅಶ್ವಥ್ ನಾರಾಯಣ
3) ಲಕ್ಷ್ಮಣ್ ಸವದಿ

4) ಕೆ. ಎಸ್.ಈಶ್ವರಪ್ಪ

5) ಆರ್.ಅಶೋಕ್

6) ಜಗದೀಶ್ ಶೆಟ್ಟರ್

7) ಬಿ.ಶ್ರೀರಾಮುಲು

8) ಎಸ್.ಸುರೇಶ್ ಕುಮಾರ್

9) ವಿ.ಸೋಮಣ್ಣ

10) ಸಿ.ಟಿ.ರವಿ

11) ಬಸವರಾಜ ಬೊಮ್ಮಾಯಿ

12) )ಕೋಟ ಶ್ರೀನಿವಾಸ ಪೂಜಾರಿ

13) ಜೆ.ಸಿ. ಮಾಧುಸ್ವಾಮಿ

14) ಸಿ.ಸಿ.ಪಾಟೀಲ್

15) ಎಚ್.ನಾಗೇಶ್ (ಪಕ್ಷೇತರ)

16) ಪ್ರಭು ಚೌವ್ಹಾಣ್

17)ಶಶಿಕಲಾ ಜೊಲ್ಲೆ

Key words: 17 new ministers – Sworn -oath -state –BJP government