ಬಿಜೆಪಿಗೆ ಬಂದ 17 ಮಂದಿ ಶಾಸಕರು ಸಚಿವರಾಗಲು ಅರ್ಹರು- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್…

ಬೆಂಗಳೂರು,ಡಿಸೆಂಬರ್,2,2020(www.justkannada.in):  ಬೇರೆ ಪಕ್ಷದಿಂದ ಬಿಜೆಪಿಗೆ ಬಂದಿರುವ 17 ಮಂದಿಯೂ ಸಚಿವರಾಗಲು ಅರ್ಹರು. ನಮ್ಮ ಪಕ್ಷದಲ್ಲಿ ಮೂಲ ವಲಸಿಗೆ ಎಂಬುದು ಇಲ್ಲ. ಎಲ್ಲರೂ ಒಂದೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದರು.logo-justkannada-mysore

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಯಾವಾಗ ಬೇಕಾದರೂ ಸಚಿವ ಸಂಪುಟ ಪುನರಚನೆಯಾಗಬಹುದು. ಕೇಂದ್ರ ನಾಯಕರ ಜತೆ ಚರ್ಚಿಸಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಥಾನ ನೀಡಲಿದ್ದಾರೆ. ನಮ್ಮಲ್ಲಿ ಮೂಲ ಬಿಜೆಪಿ, ವಲಸಿಗ ಬಿಜೆಪಿ ಎಂಬುದಿಲ್ಲ ಎಂದರು. ಇನ್ನು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.17-mlas-came-bjp-eligible-ministers-bjp-president-nalin-kumar-katil

ಲವ್ ಜಿಹಾದ್ ಬಗ್ಗೆ ಸಿದ್ಧರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ಸಿಎಂ ಆಗಿದ್ದ ಸಿದ್ಧರಾಮಯ್ಯನವರು ಇಂತಹ ಹೇಳಿಕೆ ನೀಡಬಾರದು. ನಾಳೆ ಬೆಳಿಗ್ಗೆ ಜನ ಸಿದ್ಧರಾಮಯ್ಯರನ್ನ ಕೇಳಬಹುದು. ಜೆಡಿಎಸ್-ಕಾಂಗ್ರೆಸ್ ಕ್ರಾಸ್ ಬ್ರೀಡಾ ಎಂದು ಕೇಳಬಹುದು ಎಂದು ಟೀಕಿಸಿದರು.

english summary…

All the 17 MLAs who came to BJP are eligible to become ministers: Nalin Kumar Kateel
Bengaluru, Dec. 2, 2020 (www.justkannada.in): BJP State President Nalin Kumar Kateel today said that cabinet reshuffle may take place at any time. “Chief Minister B. S. Yedyurappa is going to take a decision soon after discussing this with the Central leaders. In BJP we don’t have any discrimination between outsiders and insiders,” he said and also clarified there is no question of changing leadership in the State.
Keywords: Nalin Kumar Kateel/ cabinet reshuffle17-mlas-came-bjp-eligible-ministers-bjp-president-nalin-kumar-katil

Key words: 17 MLAs – came – BJP – eligible – ministers-BJP President -Nalin Kumar Katil