ಕೇಂದ್ರ ಸರ್ಕಾರದ‌ ಯೋಜನೆಗೆ 160 ವಸತಿ ಶಾಲೆಗಳು ಆಯ್ಕೆ: 32 ಕೋಟಿ ಮಂಜೂರು -ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ…..

kannada t-shirts

ಬೆಂಗಳೂರು. ಡಿ.25,2019(www.justkannaa.in):  ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೊಭಾವವನ್ನು ಬೆಳೆಸಲು ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಅಟಲ್ ಟಿಂಕರಿಂಗ್  ಲ್ಯಾಬ್ ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದ 160 ವಸತಿ ಶಾಲೆಗಳು ಈ ಯೋಜನೆಯಡಿ ಆಯ್ಕೆಯಾಗಿವೆ. ಪ್ರತಿ ಶಾಲೆಗೆ ತಲಾ ,20 ಲಕ್ಷದಂತೆ 32 ಕೋಟಿ ರೂ. ಮಂಜೂರು ಮಾಡಿದೆ ಎಂದು ಉಪಮುಖ್ಯಮಂತ್ರಿಗಳಾದ ‌ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ಬೆಂಗಳೂರಿನಲ್ಲಿಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಆಯೋಜಿಸಿದ್ದ ವಸತಿ ಶಾಲೆಗಳಿಗೆ ನೂತನವಾಗಿ ಆಯ್ಕೆಯಾದ ಶಿಕ್ಷಕರಿಗೆ ನೇಮಕಾತಿ ಆದೇಶ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಉತ್ತಮವಾಗಿದ್ದು, ಶೇ.95ರಷ್ಟು ಫಲಿತಾಂಶ ಬಂದಿದೆ.  ದೀನ ದಲಿತರ ಬಗ್ಗೆ ಕಾಳಜಿ‌ ಇರುವ ಮುಖ್ಯಮಂತ್ರಿಗಳಾದ ‌ಯಡಿಯೂರಪ್ಪ ಅವರು ಮುಂದಿನ ಬಜೆಟ್ ನಲ್ಲಿ‌ ಗಂಗಾ ಕಲ್ಯಾಣ ಯೋಜನೆ,  ಶಿಕ್ಷಣ,  ಬಡವರಿಗೆ ಭೂಮಿ ಖರೀದಿ, ನೀರಾವರಿ ಯೋಜನೆಗೆ ಹೆಚ್ಚಿನ ‌ಅನುದಾನ‌ ನೀಡಲಿದ್ದಾರೆ.ಮುಂದಿನ‌ ವರ್ಷ ಶೇ. 80 ರಷ್ಟು  ವಸತಿ ನಿಲಯಗಳು ಸ್ವಂತ ಕಟ್ಟಡ ಹೊಂದುವಂತೆ ಕ್ರಮಕೈಗೊಳ್ಳಲಾಗುವುದು. ವಸತಿ ಶಿಕ್ಷಣ ಸಂಸ್ಥೆಗಳಲ್ಲಿ 1.7ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಸಾಧಕರಾಗಬೇಕು. ಅದಕ್ಕಾಗಿ ಮೂಲಭೂತ ಸೌಕರ್ಯಗಳ ನ್ನು ಅಭಿವೇದ್ದಿ ಪಡಿಸಲಾಗುತ್ತಿದೆ. 3527 ಶಿಕ್ಷಕರ. ನೇಮಕಾತಿ ಗೆ ಕ್ರಮಕೈಗೊಳ್ಳಲಾಗಿದೆ. ಕೌನ್ಸಿಲಿಂಗ್ ಮೂಲಕ 660 ಶಿಕ್ಷಕರಿಗೆ ಸ್ಥಳ ನಿಯೋಜನೆ ಮಾಡಲಾಗಿದೆ‌ . ಕಳೆದ 3  ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶೂ ನೀಡಿರಲಿಲ್ಲ ಎಂದು ತಿಳಿದ ಕೂಡಲೇ ಮಂಜೂರು ಮಾಡಿರುವುದಾಗಿ ಅವರು ತಿಳಿಸಿದರು.

ಕರ್ನಾಟಕದಲ್ಲಿ ‌ವಸತಿ ಶಾಲೆಗಳನ್ನು‌ಪ್ರಾರಂಭಿಸಲು ಆಂಧ್ರಪ್ರದೇಶದ ಅಂದಿನ‌‌ ಮುಖ್ಯ ಮಂತ್ರಿಗಳಾದ ‌ಎನ್ ಟಿ‌ ರಾಮರಾವ್  ಪ್ರೇರಣೆಯಾಗಿದ್ದಾರೆ. ರಾಜ್ಯದಲ್ಲಿ‌ ದೇವೇಗೌಡ ಅವರು ಮುಖ್ಯಮಂತ್ರಿ ಹಾಗೂ‌ ರಮೇಶ್ ಜಿಗಜಿಣಗಿ ಅವರು ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ತಾವು ಅಧ್ಯಯನ ವರದಿಯನ್ನು ಮಂಡಿಸಿ ಒತ್ತಡ ಹಾಕಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಯಿತು. ತಾವು ವ್ಯಾಸಂಗ ಮಾಡುತ್ತಿರುವಾಗ ಮರಗಳ ಕೆಳಗೆ ತರಗತಿಗಳು ನಡೆಯುತ್ತಿದ್ದವು. ಇಂದು ಸೌಲಭ್ಯಗಳಿವೆ. ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ವಿಧ್ಯಾರ್ಥಿಗಳು ಗುರಿಯನ್ನು ಸಾಧಿಸಿ ಸಾಧಕರಾಗಬೇಕು ಎಂದು ತಿಳಿಸಿದರು.

ಎಸ್ ಸಿಪಿ‌ ಮತ್ತು ಟಿಎಸ್ ಪಿ ಯೋಜನೆಯ ಸಲಹೆಗಾರರಾದ ವೆಂಕಟಯ್ಯ, ಸಮಾಜ‌ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ಮಾತನಾಡಿ, ಶಿಕ್ಷಕರು ನಿಸ್ವಾರ್ಥ ದಿಂದ ಸೇವೆ ಮಾಡಿ, ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ಕ್ಕಾಗಿ ಶ್ರಮಿಸಬೇಕು. ಎಲ್ಲಾ ವಿದ್ಯಾರ್ಥಿಗಳನ್ನು ಸಾಧಕರನ್ನಾಗಿಸಬೇಕು ಎಂದರು.

123 ಕ್ರೀಡಾಪಟುಗಳಿಗೆ,  36 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸನ್ಮಾನಿಸಲಾಯಿತು. ಶಿಕ್ಷಕರಿಗೆ ನೇಮಕಾತಿ ಆದೇಶ‌ ನೀಡಲಾಯಿತು. ಕ್ರೈಸ್ಟ್ ಮ್ಯಾಗಜಿನ್ ಬಿಡುಗಡೆ ಮಾಡಲಾಯಿತು. ರಾಜ್ಯ ಬುಡಕಟ್ಟು ಸಂಶೋಧನಾಲಯ ನಿರ್ದೇಶಕ ಡಾ.ಟಿ.ಬಸವನಗೌಡ ಬಹುಮಾನ ವಿತರಿಸಿದರು. ಬಳಿಕ  ವಸತಿ ಶಿಕ್ಷಣ  ಶಾಲೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೆಕ್ಕಪತ್ರಾಧಿಕಾರಿ‌ ಶಿವಪುತ್ರಪ್ಪ ಸ್ವಾಗತಿಸಿ, ನಿರೂಪಿಸಿದರು.

Key words: 160 residential school – central government –project-DCM -Govinda M Karajola.

website developers in mysore