ರೈತರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ ಜಾರಿ: ಕೃಷಿ ಅಭಿವೃದ್ದಿಗೆ 16 ಅಂಶಗಳು ಪ್ರಕಟ- ಕೇಂದ್ರ ಬಜೆಟ್ ನಲ್ಲಿ ಘೋಷಣೆ…

ನವದೆಹಲಿ,ಫೆ,1,2020(www.justkannada.in): ಮಹಿಳಾ ರೈತರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ ಜಾರಿ. ರೈತ ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ ಮಾಡಲಾಗುತ್ತಿದೆ. ಕೃಷಿ ಅಭಿವೃದ್ದಿಗೆ 16 ಅಂಶಗಳು ಪ್ರಕಟ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಲೋಕಸಭೆಯಲ್ಲಿ ಇಂದು 2020-21ನೇ ಸಾಲಿನ ಕೇಂದ್ರ  ಬಜೆಟ್ ಅನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ.  ಬಜೆಟ್ ಮಂಡನೆ ಆರಂಭಿಸಿದ ಅವರು,  ಬ್ಯಾಂಕಿಂಗ್ ವಲಯಕ್ಕೆ ಕೇಂದ್ರ ಸರ್ಕಾರ ಹಣ ಹೊಂದಿಸಿದೆ. ಬ್ಯಾಂಕಿಂಗ್ ವಲಯವನ್ನು ಸ್ವಚ್ಛಗೊಳಿಸಲಾಗಿದೆ. ಇವತ್ತಿನ ಹಣಕಾಸು ಸ್ಥಿತಿ ಉತ್ತಮವಾಗಿರಲು ಜೇಟ್ಲಿ ಕಾರಣ. ಚೆಕ್ ಪೋಸ್ಟ್ ಗಳ ನಿರ್ಮೂಲನೆಯಿಂದ ಶೇ.20ರಷ್ಟು ಸಮಯ ಉಳಿತಾಯ. ಜಿಎಸ್ ಟಿ ಜಾರಿಯಿಂದ ರಾಜಕೀಯ ಮೀರಿ ಬೆಳೆಯುತ್ತದೆ ಎಂಬುದು ಸಾಬೀತಾಗಿದೆ. ಸಾರಿಗೆ ವಲಯದಲ್ಲಿ ಭಾರೀ ಅಭಿವೃದ್ಧಿಗೆ ಜಿಎಸ್ ಟಿ ಕಾರಣವಾಗಿದೆ. ಜಿಎಸ್ ಟಿಯಿಂದ ಪ್ರತಿಯೊಂದು ಕುಟುಂಬಕ್ಕೂ ಒಳಿತಾಗಿದೆ.  ಈ ಬಜೆಟ್ ಆದಾಯ ಹೆಚ್ಚಳಕ್ಕೆ ಉತ್ತೇಜನ ನೀಡಲಿದೆ. ವಾರ್ಷಿಕವಾಗಿ ಒಂದು ಲಕ್ಷ ಕೋಟಿ ರೂಪಾಯಿ ತೆರಿಗೆ ವಿನಾಯ್ತಿ ಸಿಕ್ಕಿದೆ ಎಂದು ತಿಳಿಸಿದರು.

40 ಕೋಟಿ ಜನರು ಈ ಬಾರಿ ಜಿಎಸ್ ಟಿ ಪಾವತಿಸಿದ್ದಾರೆ. ಜಿಎಸ್ ಟಿಯಿಂದ ರಿಟರ್ನ್ಸ್ ಸಲ್ಲಿಕೆ ತುಂಬಾ ಸರಳವಾಗಿದೆ. ನಮ್ಮ ಪ್ರಧಾನಿ ಮೋದಿಯಿಂದಾಗಿ ಸರ್ಕಾರ ನೀಡುವ ಪ್ರತಿ ಪೈಸೆ ನಾಗರಿಕನಿಗೆ ಸಿಗುತ್ತಿದೆ. ಗೃಹ ನಿರ್ಮಾಣದ ಮೂಲಕ ಜನರಿಗೆ ನೆರವು. ಹಿಂದುಳಿದ ವರ್ಗಗಳಿಗೆ ಸಾಲ ಸೌಲಭ್ಯ, ಡಿಜಿಟಲ್ ಇಂಡಿಯಾ ಗುರಿ ಸಾಕಾರದತ್ತ ಹೆಜ್ಜೆ ಹಾಕಿದೆ. ಈ ಬಜೆಟ್ ದೇಶದ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ ಎಂದು ತಿಳಿಸಿದರು.

271 ಮಿಲಿಯನ್ ಜನರು ಬಡತನದಿಂದ ಹೊರ ಬಂದಿದ್ದಾರೆ. 2018-19ರಲ್ಲಿ ಶೇ.7ರಷ್ಟು ದೇಶದ ಆರ್ಥಿಕ ವೃದ್ದಿ ದರ ದಾಖಲಾಗಿತ್ತು. ಕಳೆದ 5 ವರ್ಷಗಳಲ್ಲಿ ಭಾರತೀಯರನ್ನು ಉದ್ಯಮಶೀಲರನ್ನಾಗಿಸಲು ಪ್ರಯತ್ನಿಸಲಾಗಿದೆ. ಭಾರತ ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ. ಈ ಬಾರಿಯ ಬಜೆಟ್ 3 ಅಂಶಗಳ ಮೇಲೆ ನಿಂತಿದೆ. ಆಕಾಂಕ್ಷೆಯ ಭಾರತ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಾಳಜಿ ಎಂದರು.

2022ರ ವೇಳೆಗೆ ಕೃಷಿ ಆದಾಯ ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ. ಆರ್ಥಿಕ ಒಳಗೊಳ್ಳುವಿಕೆ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಾಗಿಸುತ್ತದೆ. ಕೃಷಿ ಮಾರುಕಟ್ಟೆ ಉದಾರೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕೃಷಿ ಅಭಿವೃದ್ದಿಗೆ 16 ಅಂಶಗಳು ಪ್ರಕಟ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಕ್ರಮ. ರೈತರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ  ಎಂದು ತಿಳಿಸಿದರು.

Key words: 16 Elements -Agricultural Improvement danya Lakshmi Scheme – Farmers – Central Budget