ಇಟಲಿಯಿಂದ ಭಾರತಕ್ಕೆ ಬರಲು 15 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರದಾಟ…

ನವದೆಹಲಿ,ಮಾ,11,2020(www.justkannada.in): ವಿಶ್ವದಾದ್ಯಂತ  ಕೊರೋನಾ ಭೀತಿ ಆವರಿಸಿರುವ ಹಿನ್ನೆಲೆ ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು ವಿದೇಶದಿಂದ ಬರುವವರನ್ನ ತಪಾಸಣೆಗೊಳಪಡಿಸಲಾಗುತ್ತಿದೆ. ಈ ನಡುವೆ ಇಟಲಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಲು ಪರದಾಡುತ್ತಿದ್ದಾರೆ.

ಇಟಲಿಯ ಮಿಲಾನ್ ನಲ್ಲಿ ಇಂಜಿನಿಯರಿಂಗ್ ಓದುತ್ತಿರುವ  15 ವಿದ್ಯಾರ್ಥಿಗಳು  ತಾಯ್ನಾಡಿಗೆ ಬರಲು ಸಂಕಷ್ಟಪಡುತ್ತಿದ್ದಾರೆ. ಈ 15 ವಿದ್ಯಾರ್ಥಿಗಳ ಪೈಕಿ ಕರ್ನಾಟಕದ ತುಮಕೂರಿನ   ಕಾರ್ತಿಕ್ ಮತ್ತು ಹೇಮೆಗೌಡ  ಎಂಬ ವಿದ್ಯಾರ್ಥಿಗಳು ಸಹ ಸೇರಿದ್ದಾರೆ.

ಭಾರತಕ್ಕೆ ಬರಲು ಮೆಡಿಕಲ್ ರಿಪೋರ್ಟ್ ಕೇಳಲಾಗುತ್ತಿದೆ. ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಲು ಮೆಡಿಕಲ್ ಸರ್ಟಿಫಿಕೇಟ್ ಅಗತ್ಯ . ಆದರೆ ಇಟಲಿಯಲ್ಲಿ ಮೆಡಿಕಲ್ ರಿಪೋರ್ಟ್ ಸಿಗೋದೇ ಕಷ್ಟವಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲು. ಹೀಗಾಗಿ ನಮ್ಮನ್ನ  ಭಾರತಕ್ಕೆ ಕರೆಸಿಕೊಳ್ಳಿ. ಭಾರತಕ್ಕೆ ಬರಲು ನೆರವಾಗಿ ಎಂದು  ಇಟಲಿಯಲ್ಲಿರುವ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

Key words:  15 engineering -students – Italy –come-india