ಮನೆಯಲ್ಲಿ ಅನುಮಾನಸ್ಪದವಾಗಿ 11 ವರ್ಷದ ಬಾಲಕಿ ಸಾವು…

kannada t-shirts

ಬೆಂಗಳೂರು,ಮೇ,7,2019(www.justkannnada.in):  ಮನೆಯಲ್ಲಿ 11 ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬಾಗಲಗುಂಟೆಯ ಮಲ್ಲಸಂದ್ರದಲ್ಲಿ ಈ ಘಟನೆ ನಡೆದಿದೆ. ಮಲ್ಲಸಂದ್ರದ ಮನೆಯಲ್ಲಿ 11 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಕತ್ತಿನ ಸುತ್ತ ಗಾಯಗಳಾಗಿರುವ ಗುರುತು ಪತ್ತೆಯಾಗಿದೆ. ಮನೆಯಲ್ಲಿ ತಂದೆ ತಾಯಿ ಇಲ್ಲದ ವೇಳೆ ಈ ಘಟನೆ ನಡೆದಿದೆ.

ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  11-year-old girl -dies -suspicion – home

website developers in mysore