ನೆರೆ ಸಂತ್ರಸ್ತರ ಗೋಳು ಕೇಳುವವರಿಲ್ಲ: ನೂರು ದಿನದ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…

kannada t-shirts

ಬೆಂಗಳೂರು,ನ,1,2019(www.justkannada.in):  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ನೂರು ದಿನವಾಗಲಿದೆ. ಆದರೆ ಬಿಜೆಪಿ ಸರ್ಕಾರದ ನೂರು ದಿನದ ಸಾಧನೆ ಶೂನ್ಯ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ  ಸಿಎಂ ಸಿದ್ಧರಾಮಯ್ಯ,  ಇಂದು 64 ನೇ ಕನ್ನಡ ರಾಜ್ಯೋತ್ಸವ. ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ರಾಜ್ಯದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭ ಕೋರಿದರು.

ಯಡಿಯೂರಪ್ಪ ಸಿಎಂ ಆಗಿ ನಾಳೆಗೆ 100 ದಿನವಾಗಲಿದೆ. ಸರ್ಕಾರ ನೂರು ದಿನ ಪೂರೈಸಿದೆ. ಸರ್ಕಾರ ಬದುಕಿರುವುದೇ ಅನೈತಿಕವಾಗಿ ಜನರ ಜನಾದೇಶಕ್ಕೆ ವಿರುದ್ಧವಾಗಿ ಸರ್ಕಾರ ಬಂದಿದೆ. ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಎಲ್ಲ ಪಕ್ಷಗಳಲ್ಲೂ ಅತಂತ್ರ ಸ್ಥಿತಿಯೇ ಇತ್ತು. ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಅಂತ ರಾಜ್ಯಪಾಲರು ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡಿದ್ದರು. ಆದರೆ ಬಿಎಸ್ ಯಡಿಯೂರಪ್ಪ ಎರಡು ದಿನ ಸಿಎಂ ಆಗಿ ಮೂರನೇ ದಿನಕ್ಕೆ ಬಿದ್ದುಹೋದ್ರು. ನಂತರ ಜೆಡಿಎಸ್ ಜೊತೆ ನಾವು ಸರ್ಕಾರ ರಚಿಸಿದ್ದೇವು. ೧೪ ತಿಂಗಳು ಮೈತ್ರಿ ಸರ್ಕಾರ ನಡೆದಿತ್ತು. ೧೪ ತಿಂಗಳು ಬಿಜೆಪಿಯವರು ಕಿರಿಕಿರಿ ಮಾಡಿದ್ರು. ಆಪರೇಷನ್ ಕಮಲದ ಮೂಲಕ ಶಾಸಕರನ್ನ ಸೆಳೆದ್ರು. ಈಗ ಅನೈತಿಕ ಸರ್ಕಾರ ರಚಿಸಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಅಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿದ ಸಿದ್ಧರಾಮಯ್ಯ, ಆಪರೇಷನ್ ಕಮಲದ ಮಾಡಿದ್ದನ್ನ  ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿಕೊಂಡಿದ್ದರು. ಆಡಿಯೋ ಸಂಭಾಷಣೆ ನನ್ನದೇ ಎಂದಿದ್ದರು. ಇವರು ಆಪರೇಷನ್ ಮಾಡದಿದ್ದರೆ ಅನುದಾನ ಕೊಟ್ಟಿದ್ದೇಗೆ. ಅನರ್ಹ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದೇಕೆ ಎಂದು ಪ್ರಶ್ನಿಸಿದರು.

ಉಪಚುನಾವಣೆ ಈಗ ಎದುರಾಗಿದೆ. ಸರ್ಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಈಗ 8 ಕ್ಷೇತ್ರ ಗೆಲ್ಲಬೇಕು. ಆದರೆ 8 ಸ್ಥಾನ ಗೆಲ್ಲೋಕೆ ಬಿಜೆಪಿಗೆ ಆಗುವುದಿಲ್ಲ. ಹೀಗಾಗಿ ಸರ್ಕಾರ ಇರೋದಾದ್ರೂ‌ ಹೇಗೆ. ಇದಕ್ಕೆ ಮಧ್ಯಂತರ ಚುನಾವಣೆ ಅಂತ ನಾನು ಹೇಳಿದ್ದು. ನಾನು ಸಿಎಂ ಆಗುವ ಆಶಯದಿಂದ ಈ ಹೇಳಿಕೆ ನೀಡಿರಲಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಪ್ರವಾಹ ಉಂಟಾಯ್ತು. ಹಿಂದೆಂದೂ ಕಂಡು ಕೇಳರಿಯದ ಪ್ರವಾಹ ದೊಡ್ಡ ಪ್ರಮಾಣದ ನಷ್ಟವನ್ನ ಮಾಡಿದೆ. ಪ್ರವಾಹ ಬಂದು ಇಲ್ಲಿಗೆ ೯೦ ದಿನಗಳಾಗುತ್ತಾ ಬಂದಿರೂ ಇಲ್ಲಿವರೆಗೆ ಸರ್ಕಾರದಿಂದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಆದರೆ ನನ್ನ ಹೇಳಿಕೆಗೆ ಸುಳ್ಳು ಅಂತ ಸಿಎಂ ಹೇಳ್ತಾರೆ. ಹಾಗಾದರೆ ನಾನು ಮಾಹಿತಿ ಇಲ್ಲದೆ ಹೇಳಿದ್ದೇನಾ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ನಾನು ದಶಕಗಳ ಕಾಲ ಹಲವು ಹುದ್ದೆ ನಿರ್ವಹಿಸಿದ್ದೇನೆ.13 ಬಾರಿ ಬಜೆಟ್ ಮಂಡಿಸಿದ್ದೇನೆ,ನಾನು ಸುಳ್ಳು ಹೇಳ್ತೀನಾ..? 2ಲಕ್ಷ ಮನೆಗಳು ಬಿದ್ದಿವೆ ಅಂತ ವರದಿ ನೀಡಿದ್ದಾರೆ. ಕೇಂದ್ರಕ್ಕೆ ಕೊಟ್ಟಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 97 ಸಾವಿರ ಅಂತ ಜಾಹಿರಾತು ನೀಡಿದ್ದಾರೆ. ಹಾಗಾದರೆ ಇವರ ಅಂಕಿಅಂಶಗಳು ಸುಳ್ಳಲ್ವಾ?. ಅಲ್ಲಿ 2 ಲಕ್ಷ ತೋರಿಸಿ ಇಲ್ಲಿ 92 ಸಾವಿರ ಅಂದರೆ ಸುಳ್ಳಲ್ವಾ?. ಯಡಿಯೂರಪ್ಪನವರೇ ಯಾಕೆ ಸುಳ್ಳು ಹೇಳ್ತೀರಾ? ಎಂದು ಸಿದ್ಧರಾಮಯ್ಯ ಹರಿಹಾಯ್ದರು.

ಪ್ರವಾಹದಿಂದ ಸಿಲುಕಿರುವ ಸಂತ್ರಸ್ಥರಿಗೆ ಶೆಡ್ ಹಾಕಿದ್ದಾರೆ, ಶೌಚಾಲಯಗಳಿಲ್ಲ. ಶಾಲಾ ಕಟ್ಟಡ ಬಿದ್ದಿವೆ, ಮಕ್ಕಳಿಗೆ ವ್ಯವಸ್ಥೆ ಮಾಡಿಲ್ಲ. ಶಾಲಾ ಮಕ್ಕಳಿಗೆ ಬೀದಿಯಲ್ಲೇ ಪಾಠ ಮಾಡ್ತಿದ್ದಾರೆ. ಶೆಡ್ ನಲ್ಲಿ ಹೋಗೋಕೆ ಜನ ಹಿಂದೇಟು ಹಾಕ್ತಿದ್ದಾರೆ. ಬಯಲಲ್ಲೇ ಶೌಚ ಮಾಡಬೇಕಾದ ಸ್ಥಿತಿ ಅಲ್ಲಿದೆ. 1800 ಮಗ್ಗಗಳು ಮಳೆಗೆ ಕೊಚ್ಚಿಹೋಗಿವೆ. 25 ಸಾವಿರ ಒಂದು ಮಗ್ಗಕ್ಕೆ ಕೊಡ್ತೀವಿ ಅಂದಿದ್ದರು. ಆರು ಮಗ್ಗ ಹೋಗಿದ್ದರೂ 25 ಸಾವಿರ . ಒಂದು ಮಗ್ಗ ಕಳೆದುಕೊಂಡ್ರೂ 25 ಸಾವಿರ. ಅಂಗಡಿ ಮುಗ್ಗಟ್ಟು ಕಳೆದುಕೊಂಡವರಿಗೂ ೨೫ ಸಾವಿರ. ಇದು ಸರ್ಕಾರ ಘೋಷಿಸಿರುವ ನೆರವು ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

Key words:  100-day- BJP government- achievement -zero – former CM- Siddaramaiah

 

website developers in mysore