ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಹಾಗೂ ರೈಲ್ವೆಗೆ 2.40 ಲಕ್ಷ ಕೋಟಿ ರೂ. ಕೇಂದ್ರ ಬಜೆಟ್ ನಲ್ಲಿ ಮೀಸಲು.

ನವದೆಹಲಿ,ಫೆಬ್ರವರಿ,1,2023(www.justkannada.in):  ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿರುವ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಹಾಗೂ ರೈಲ್ವೆಗೆ 2.40 ಲಕ್ಷ ಕೋಟಿ ರೂ. ಮೀಸಲಿಡುವುದಾಗಿ ಘೋಷಣೆ ಮಾಡಿದ್ದಾರೆ.

ಜಿಡಿಪಿಯ ಶೆ.3.3ರಷ್ಟು ಉದ್ಯೋಗ ಸೃಷ್ಟಿಗೆ ಮೀಸಲು, ರೈಲ್ವೆಗೆ 2.40 ಲಕ್ಷ ಕೋಟಿ ರೂಪಾಯಿ ಮೀಸಲು.ಸರಕು ಸಾಗಣೆಗೆ ನೂರು ಹೊಸ ಸಾರಿಗೆ ಯೋಜನೆ ಜಾರಿ ಮಾಡುವುದು. ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ ಸಾಗಣೆ. ದೇಶದಲ್ಲಿ 50 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ. ಬುಡಕಟ್ಟು ಸಮುದಾಯದ ಜನರ ಶಿಕ್ಷಣ, ರಸ್ತೆ ನಿರ್ಮಾಣಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಮ್ಯಾನ್ ಹೋಲ್ ನಿಂದ ಮಷಿನ್ ಹೋಲ್ ಗೆ ಬದಲಾವಣೆ, ದೇಶದ ಎಲ್ಲಾ ನಗರಗಳು ಮ್ಯಾನ್ ಹೋಲ್ ಮುಕ್ತ ಗುರಿ. ಕೃತಕ ಬುದ್ಧಿಮತ್ತೆ ಜಾರಿ. ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ AI(ಕೃತಕ ಬುದ್ಧಿಮತ್ತೆ) ಸೆಂಟರ್ ಗಳ ಸ್ಥಾಪನೆ. ಲ್ಯಾಬ್ ನಲ್ಲಿ ಸಹಜ ಡೈಮಂಡ್ ಗಳ ಉತ್ಪಾದನೆ. ಈ ಮೂಲಕ ನೈಸರ್ಗಿಕ ವಜ್ರ ಉತ್ಪಾದನೆಗೆ ಕ್ರಮ ಕೈಗೊಳ್ಳುವುದಾಗ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Key words: 10 lakh crore – job -creation -Union Budget.