ಸ್ಪರ್ಧಾರ್ಥಿಗಳಿಗೆ ಕೋವಿಡ್: ವಿಶ್ವ ಸುಂದರಿ 2021 ಸ್ಪರ್ಧೆ ತಾತ್ಕಾಲಿಕವಾಗಿ ಮುಂದೂಡಿಕೆ

kannada t-shirts

ನವದೆಹಲಿ, ಡಿಸೆಂಬರ್ 17, 2021 (www.justkannada.in): ಮಿಸ್ ಇಂಡಿಯಾ ಮಾನಸ ವಾರಣಾಸಿ ಅವರೂ ಒಳಗೊಂಡಂತೆ ಹಲವು ಸ್ಪರ್ಧಿಗಳು ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಸ್ಪರ್ಧಿಗಳು, ಸಿಬ್ಬಂದಿ, ತಂಡದ ಸದಸ್ಯರು ಹಾಗೂ ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಸುಂದರಿ ೨೦೨೧ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸ್ಪರ್ಧೆಯ ಆಯೋಜಕರು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.

ವಿಶ್ವ ಸುಂದರಿ ೨೦೨೧ ಸ್ಪರ್ಧೆ ಗುರುವಾರದಂದು ಪ್ಯೂರ್ಟೊ ರಿಕೊದಲ್ಲಿ ನಡೆಯಬೇಕಿತ್ತು. “ವಿಶ್ವ ಸುಂದರಿ ೨೦೨೧ ಸ್ಪರ್ಧೆಯ ನಿಗಾವಣಾ ತಂಡದಲ್ಲಿರುವ ತಜ್ಞ ವೈದ್ಯರೊಂದಿಗೆ ಹಾಗೂ ಪ್ಯೂರ್ಟೊ ರಿಕೊದ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ, ಚರ್ಚಿಸಿದ ನಂತರ ಈ ಸ್ಪರ್ಧೆಯ ಆಯೋಜಕರು ಸ್ಪರ್ಧೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ,” ಎಂದು ಗುರುವಾರ ರಾತ್ರಿ ಸ್ಪರ್ಧೆಯ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಘೋಷಿಸಲಾಗಿದೆ.

“ಈ ಸ್ಪರ್ಧೆಯಲ್ಲಿ ವೇದಿಕೆಯ ಮೇಲೆ ನಡೆಯುವ ಚಟುವಟಿಕೆಗಳು ಹಾಗೂ ಡ್ರೆಸಿಂಗ್ ಕೊಠಡಿಯಲ್ಲಿ ನಡೆಯುವ ಚಟುವಟಿಕೆಗಳಿಂದಾಗಿ ಸೋಂಕು ಹರಡುವ ಅಪಾಯವನ್ನು ಗಮನಿಸಿ, ಸ್ಪರ್ಧಿಗಳು, ನಿರ್ಮಾಣ ತಂಡ ಹಾಗೂ ಪ್ರೇಕ್ಷಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಬುಧವಾರದಂದು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಸೋಂಕು ಪ್ರಕರಣಗಳು ಹೆಚ್ಚಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ಸ್ಪರ್ಧೆಯನ್ನು ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ತಿಳಿಸಲಾಗಿದೆ.

ತಜ್ಞರ ಪ್ರಕಾರ ಸೋಂಕಿತರನ್ನು ಕೂಡಲೇ ಕ್ವಾರಂಟೈನ್‌ಗೆ ಒಳಪಡಿಸಿ, ನಿಗಾವಹಿಸಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆರೋಗ್ಯ ಅಧಿಕಾರಿಗಳು ಹಾಗೂ ಸಲಹಾಗಾರರು ಎಲ್ಲವೂ ಸರಿ ಇದೆ ಎಂದು ತಿಳಿಸಿದ ನಂತರ ಮಾತ್ರವೇ ಸ್ಪರ್ಧಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಗಳು ತಮ್ಮ ತಮ್ಮ ಸ್ವಂತ ದೇಶಗಳಿಗೆ ಹಿಂದಿರುಗಲು ಸಮ್ಮತಿಸಲಾಗುತ್ತದೆ.

ಮೂಲತಃ ತೆಲಂಗಾಣ ರಾಜ್ಯದವರಾದ ವಾರಣಾಸಿಯ ನಿವಾಸಿ ಮಿಸ್ ಇಂಡಿಯಾ ಅವರಿಗೂ ಸಹ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಮಿಸ್ ಇಂಡಿಯಾ ಆಯೋಜಕರು ತಿಳಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Covid – contestants- Miss Universe 2021- contest -temporarily -postponed

 

website developers in mysore